ನೈಟ್ರೋಜನ್ ಆತ್ಮಹತ್ಯೆಯ ಹೊಸ ಮಾರ್ಗ

Avinash--01

ಹೈದ್ರಾಬಾದ್,ಜು.23-ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದು, ನೈಟ್ರೋಜನ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ್(28) ಸಾವನ್ನಪ್ಪಿರುವ ಯುವಕ. ಹೈದರ್ ನಗರದ ಬಳಿ ಕಾರು ಪಾರ್ಕ್ ಮಾಡಿ ಅವಿನಾಶ್ ಅಲ್ಲೇ ಕುಳಿತು ಗ್ಯಾಸ್‍ಮಾಸ್ಕ್ ಮೂಲಕ ನೈಟ್ರೋಜನ್ ಸೇವಿಸಿದ್ದು, ಮೃತಪಟ್ಟು ಮೂರು ದಿನಗಳೇ ಕಳೆದಿದೆ. ಸಮೀಪದ ಮನೆಯವರು ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ತಪಾಸಣೆ ವೇಳೆ ಅವಿನಾಶ್ ಶವ ಪತ್ತೆಯಾಗಿದೆ.

ಅವಿನಾಶ್ ಸುಸೈಡ್ ನೋಟ್ ಕೂಡ ಬರೆದಿಟ್ಟಿದ್ದು , ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆ ಪ್ರೀತಿಗೆ ನಿರಾಕರಿಸಿದ್ದರಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಹಣಕಾಸಿನ ತೊಂದರೆ ಕೂಡ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin