ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾದ ಪತಿ

Rape--01

ಗೌರಿಬಿದನೂರು, ಜು.23- ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ತಾಲೂಕಿನ ವಾಟದಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.ಗಾಯಿತ್ರಿ(25) ಪತಿಯಿಂದಲೇ ಕೊಲೆಯಾದ ಮಹಿಳೆ, ನಾಗರಾಜು ಕೊಲೆ ಮಾಡಿದ ಆರೋಪಿ. ವಾಟದಹೊಸಹಳ್ಳಿ ಗ್ರಾಮದ ನಾಗರಾಜು ಕಳೆದ 6 ವರ್ಷಗಳ ಹಿಂದೆ ಗುಡಿಬಂಡೆಯ ಶ್ರೀರಾಮಯ್ಯ ಎಂಬುವವರ ಮಗಳಾದ ಗಾಯಿತ್ರಿಯನ್ನು ಮದುವೆಯಾಗಿದ್ದರೂ ನಾಗರಾಜು ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಕಳೆದೊಂದು ವರ್ಷದಿಂದಲೂ ಪ್ರತಿನಿತ್ಯ ಕುಡಿದು ಬಂದು ಹೆಂಡತಿ ವಿನಾಕಾರಣ ಕಿರುಕುಳವನ್ನು ನೀಡುತ್ತಿದ್ದು, ಶುಕ್ರವಾರ ರಾತ್ರಿ ಗಂಡ ಹೆಂಡಿರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin