ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಶರದ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

SHARADKUMAR

ನವದೆಹಲಿ, ಜು. 23- ವಿಶ್ವ ಪ್ಯಾರಾ ಅಥ್ಲೆಟಿಕ್ಸ್‍ನ ಹೈ ಜಂಪ್ ವಿಭಾಗದಲ್ಲಿ ಶರದ್ ಕುಮಾರ್ ಅವರು ಬೆಳ್ಳಿ ಪದಕ ಹಾಗೂ ವರುಣ್ ಭಾಟಿ ಅವರು ಕಂಚು ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಲಂಡನ್‍ನಲ್ಲಿಂದು ನಡೆದ ಲಾಂಗ್ ಜಂಪ್ ವಿಭಾಗದಲ್ಲಿ ಯುಎಸ್‍ಎ ಸ್ಯಾಮ್ ಜಿವಿವಿ 1.86 ಮೀ ಉದ್ದ ಜಿಗಿಯುವ ಮೂಲಕ ಚಿನ್ನದ ಪದಕವನ್ನು ಜಯಿಸಿದರೆ, ಶರದ್ ಕೇವಲ 0.02 ಮೀಟರ್‍ನಿಂದ ಹಿಂದೆ ಬಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಶರದ್ ಸಂತಸ:

ನನಗೆ ಈ ಜಿಗಿತವು ಸಂತಸ ತಂದಿದೆ. ನಾನು ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗದಿದ್ದರೂ ದೇಶಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟ ತೃಪ್ತಿ ನನಗಿದೆ ಎಂದರು. ಇದಕ್ಕೂ ಮುನ್ನ ನಡೆದ ಜೆವಲಿನ್ ಥ್ರೋ ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್ ಜುಗಾರ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ, ಅಮಿತ್ ಸಾರೋಹಾ ಬೆಳ್ಳಿ ಪದಕ ಹಾಗೂ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕರಾಮ್‍ಜೋತ್ ದಾಲಾಲ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದರೊಂದಿಗೆ ಭಾರತ ತಂಡವು ಒಟ್ಟು 5 ಪದಕಗಳನ್ನು ಗೆದ್ದುಕೊಂಡಿದೆ.

ವೀರೇಂದ್ರ ಸೆಹ್ವಾಗ್ ಶುಭಾಶಯ:

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಿದ ಎಲ್ಲ ಆಟಗಾರರಿಗೂ ಭಾರತ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin