ಪ್ರಧಾನಿ ಮೋದಿ ವಿರುದ್ದ ಉದ್ಧವ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ಮುಂಬೈ,ಜು.23-ಪ್ರಧಾನಿ ನರೇಂದ್ರ ಮೋದಿ ಮೇಲೆ ಮತ್ತೆ ವಾಗ್ದಾಳಿ ನಡಸಿರುವ ಶಿವಸೇನೆ ಕೇಂದ್ರ ಸರ್ಕಾರ ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಅಧಿಕಾರ ಕೇಂದ್ರೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ದೂರಿದೆ. ಪ್ರಧಾನಿಯವರ ಅಚ್ಛಾದಿನ್ ಕೇವಲ ಜಾಹೀರಾತಿನಲ್ಲಿ ಮಾತ್ರ ಕಾಣುತ್ತಿದೆ. ನಿಜಾರ್ಥದಲ್ಲಿ ಎಲ್ಲಿ ಅಚ್ಛೇ ದಿನ್ ಎಂಬುದು ಗೊತ್ತಾಗುತ್ತಿಲ್ಲ. ಕೇಂದ್ರ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮತ್ತು ಕೇಂದ್ರೀಕರಣ ಎಂದರೆ ಏನೆಂಬುದನ್ನು ತಿಳಿದುಕೊಳ್ಳಬೇಕೆಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರಗಳಿಗೆ ಆಡಳಿತ ನಡೆಸಲು ತನ್ನದೇ ಆದ ನೀತಿ ನಿಯಮಗಳಿರುತ್ತವೆ. ಆದರೆ ಪ್ರಧಾನಿಯವರು ಎಲ್ಲ ರಾಜ್ಯಗಳ ಅಧಿಕಾರವೂ ತನ್ನ ಬಳಿಯೇ ಇರಲಿ ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಸೇನೆ ಬೆಂಬಲಿಸಿತ್ತು. ಆದರೆ ಪುನಃ ತನ್ನ ಹಳೆ ವರಸೆ ಮುಂದುವರೆಸಿರುವುದರಿಂದ ಮಹಾರಾಷ್ಟ್ರದಲ್ಲಿ ಮೈತ್ರಿಗೆ ಅಡ್ಡಿ ಉಂಟಾಗಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆ ಅತ್ಯಂತ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿ ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡಿತ್ತು. ವಿಧಾನಸಭೆಯಲ್ಲಿ ಮೈತ್ರಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇನೆಗೆ ಬೆಂಬಲ ನೀಡುವ ಮೂಲಕ ಅಧಿಕಾರ ತ್ಯಾಗ ಮಾಡಿದ್ದರು. ಈಗ ಪುನಃ ಸೇನೆ ಬಿಜೆಪಿಯನ್ನೇ ಟೀಕೆ ಮಾಡಿರುವುದು ಫಡ್ನವೀಸ್ ಕಣ್ಣು ಕೆಂಪಾಗುವಂತೆ ಮಾಡಿದೆ. ಸರಕು ಸೇವಾ ತೆರಿಗೆ(ಜಿಎಸ್‍ಟಿ) ಅನುಷ್ಠಾನಗೊಳಿಸುವಲ್ಲೂ ಕೇಂದ್ರ ಸರ್ಕಾರ ವಿಳಂಬ ಮಾಡಿತ್ತು. ಒಂದೆಡೆ ಚೀನಾ ತನ್ನಲ್ಲಿರುವ ಮುಸ್ಲಿಮರನ್ನು ಭಾರತದತ್ತ ಹೊರದಬ್ಬಲು ಹೊಂಚು ಹಾಕುತ್ತಿದೆ. ನೀವು ಗಡಿಯಲ್ಲಿ ಎಷ್ಟೇ ಚೆಕ್‍ ಪೋಸ್ಟ್‍ಗಳನ್ನು ಸ್ಥಾಪಿಸಿದರೂ ರಾಷ್ಟ್ರೀಯ ಭದ್ರತೆಗೆ ಉಂಟಾಗಿರುವ ಬೆದರಿಕೆ ಕಡಿಮೆಯಾಗಿದೆ ಎಂದು ಪ್ರಶ್ನಿಸಿದ್ದಾರೆ.

ನೋಟು ಅಮಾನಿಕರಣದಿಂದ ದೇಶದಲ್ಲಿ ಮಹಾನ್ ಕ್ರಾಂತಿಯೇ ಉಂಟಾಗಲಿದೆ ಎಂದು ಪ್ರಚಾರ ಮಾಡಿದ್ದೀರಿ. ಇಂದು ದೇಶದಲ್ಲಿ 15 ಲಕ್ಷ ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. 60 ಲಕ್ಷ ಮಂದಿಗೆ ನೋಟು ಅಮಾನಿಕರಣ ನೇರ ಹೊಡೆತ ಬಿದ್ದಿದೆ. ಇವರಿಗೆ ನೀವು ಉದ್ಯೋಗ ಕೊಡಲು ಸಿದ್ದರಿದ್ದೀರಾ? ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಆಫ್ ಇಂಡಿಯಾ ಕಲ್ಪನೆಗಳು ಏನಾದವು ಎಂದು ಠಾಕ್ರೆ ಕಿಡಿಕಾರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin