ಭಾರತದ ವನಿತೆಯರ ವಿಶ್ವಕಪ್ ಕನಸು ಭಗ್ನ, ಇಂಗ್ಲೆಂಡ್ ಚಾಂಪಿಯನ್

India

ಲಾರ್ಡ್ಸ್ , ಜು. 23- ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾರ್ಡ್ಸ್ ನಲ್ಲಿ ಇಂದು ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 9 ರನ್ ಗಳ ಭರ್ಜರಿ  ಜಯ ಸಾಧಿಸುವ ಮೂಲಕ ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಭಾರತಕ್ಕೆ ಗೆಲ್ಲಲು 229 ರನ್‍ಗಳ ಗುರಿ ನೀಡಿತ್ತು.  ಎಚ್ಚರಿಕೆಯಿಂದಲೇ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಮಹಿಳೆಯರಿಗೆ ಆರಂಭಿಕ ಆಘಾತ ಕಾದಿತ್ತು. ಸ್ಮೃತಿ ಮಂದಾನ ಅವರು ಶೂನ್ಯಕ್ಕೆ ಔಟಾದರು. ತಂಡದ ಸ್ಕೋರ್ 43ರನ್ ಆಗಿದ್ದಾಗ ನಾಯಕ ಮಿಥಾಲಿ ರಾಜ್ ಅವರು ಆನಗತ್ಯವಾಗಿ ರನೌಟ್ ಆದರು. ಆರಂಭಿಕ ಆಟಗಾರ್ತಿ ಪೂನಮ್ ರೌತ್ 86ರನ್ ಗಳಿಸಿ ಉತ್ತಮ ಅಟ ಪ್ರದರ್ಶಿಸಿದರು. ಹರ್ಮನ್ ಪ್ರೀತ್ ಕೌರ್ 51 ರನ್ ಗಳಿಸಿ ಪೂನಮ್ ಗೆ ಸಾಥ್ ನೀಡಿದರು. ನಂತರ ಬಂದ ವೇದಾ ಕೃಷ್ಣಮೂರ್ತಿ 35ರನ್ ಗಳಿಸಿ ರನ್ ಗತಿ ಹೆಚ್ಚಿಸಲು ಯತ್ನಿಸಿದ್ದರು. ಆದರೂ ಜಯದ ಗುರಿ ತಲುಪಲು ಈ ಪ್ರಯತ್ನ ಸಾಕಾಗಲಿಲ್ಲ ಅಂತಿಮವಾಗಿ 48.4 ನೇ ಓವರ್ ನಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸುವ ಮೂಲಕ ಭಾರತದ ಮಹಿಳೆಯರು ಸೋಲೊಪ್ಪಿಕೊಂಡರು .

ಇಂಗ್ಲೆಂಡ್ ಪರ ಲೌರೆನ್ ವಿನ್ ಫೀಲ್ಡ್ 24, ಟ್ಯಾಮಿ ಬೀಮೌಂಟ್ 23, ಸಾರಾ ಟೇಲರ್ 45, ಹೀದರ್ ನೈಟ್ 1, ನಟಾಲಿ ಸ್ಕೀವರ್ 51, ಕ್ಯಾಥರೀನ್ ಬ್ರಂಟ್ 34, ಜೆನ್ನಿ ಗುನ್ ಅಜೇಯ 25 ಮತ್ತು ಲೌರಾ ಮಾರ್ಷ್ 14 ರನ್ ಗಳಿಸಿದ್ದಾರೆ.

ಭಾರತ ಪರ ಜೂಲನ್ ಗೋಸ್ವಾಮಿ 3, ಪೂನಂ ಯಾದವ್ 2 ಮತ್ತು ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದಿದ್ದಾರೆ.

 

Updates Awaiting …

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin