ಮುಂಬೈನಲ್ಲಿ ಬೇಕರಿ ಚಿಮಣಿ ಕುಸಿದು ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mumabi--01

ಮುಂಬೈ, ಜು.23-ಬೇಕರಿಯ ಚಿಮಣಿ (ಹೊಗೆ ಗೂಡು) ಕುಸಿದು ಮೂವರು ಕಾರ್ಮಿಕರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಮುಂಬೈನಲ್ಲಿ ಸಂಭವಿಸಿದೆ. ಸಬ್‍ಅರ್ಬನ್ ಜೋಗೇಶ್ವರಿಯ ಎಸ್.ವಿ.ರಸ್ತೆಯ ಒಂದು ಅಂತಸ್ತಿನ ಬೇಕರಿ ಒಳಗೆ ನಿನ್ನೆ ರಾತ್ರಿ 10.30ರಲ್ಲಿ ಕಾರ್ಮಿಕರು ಊಟ ಮಾಡುತ್ತಿದ್ದಾಗ, ಚಿಮಣಿ ಕುಸಿದು ಬಿದ್ದು ಈ ದುರಂತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.  ಕುಸಿದ ಆವಶೇಷಗಳ ಅಡಿ ಸಿಲುಕಿದ್ದ ಐವರು ಕಾರ್ಮಿಕರನ್ನು ಪೊಲೀಸರು ಹೊರೆಗೆ ತೆಗೆದು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಮೂವರು ಅಸುನೀಗಿದರು. ಇನ್ನಿಬ್ಬರು ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin