ರಾಷ್ಟ್ರಪತಿ ಚುನಾವಣೆಯಲ್ಲಿ 77 ಮತಗಳು ಅಸಿಂಧುವಾಗಲು ಕಾರಣವೇನು ಗೊತ್ತೇ.. ?

ಈ ಸುದ್ದಿಯನ್ನು ಶೇರ್ ಮಾಡಿ

Voting--01

ನವದೆಹಲಿ, ಜು.23-ಭಾರತದ 14ನೆ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಚುನಾಯಿತರಾಗಿದ್ದಾರೆ. ಈ ಚುನಾವಣೆಯಲ್ಲಿ 77 ಮತಗಳು (ಶಾಸಕರು ಮತ್ತು ಸಂಸದರೇ ಚಲಾಯಿಸಿದ್ದ ಹಕ್ಕುಗಳು) ಅಸಿಂಧುವಾಗಿ ತಿರಸ್ಕೃತವಾಗಿದ್ದು ಅಚ್ಚರಿ ಮೂಡಿಸಿತ್ತು.   ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಂಸದರೇ ಚಲಾಯಿಸುವ ಮತಗಳು ಅಸಿಂಧುವಾಗಲು ಕಾರಣವೇನು ಎಂದು ಎಲ್ಲರೂ ಹುಬ್ಬೇರಿಸುವಂತಾಯಿತು. ಜನಪ್ರತಿನಿಧಿಗಳು ಮಾಡಿದ ಸಣ್ಣಪುಟ್ಟ ಲೋಪ-ದೋಷಗಳು ಕೆಲವೊಮ್ಮೆ ದೊಡ್ಡ ಪ್ರಮಾದಗಳಿಗೂ ಕಾರಣವಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ.

ರಾಷ್ಟ್ರಪತಿ ಚುನಾವಣೆಯಲ್ಲಿ 21 ಸಂಸದರು ಮತ್ತು 56 ಶಾಸಕರ ಮತಗಳು ಕುಲಗೆಟ್ಟ ಮತಗಳಾಗಿವೆ. ಈ ಚುನಾವಣೆಯಲ್ಲಿ ಆ ಮತಗಳ ಒಟ್ಟು ಮೌಲ್ಯ 20,942. ಈ ಮತಗಳು ಅಸಿಂಧುವಾಗಿದೆಯಾದರೂ ಎನ್‍ಡಿಎ ಅಭ್ಯರ್ಥಿ ಕೋವಿಂದ್ ಅವರ ಗೆಲುವಿನ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ. ಏಕೆಂದರೆ ಅವರು 3.67 ಲಕ್ಷ ಮತಗಳ ಅಂತರದಿಂದ ದೇಶದ ಅತ್ಯುನ್ನತ ಹುದ್ದೆಗೆ ಜಯಶೀಲರಾಗಿದ್ದಾರೆ. ಆದರೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೆ, ಈ ಒಂದೊಂದು ಮತಗಳು ನಿರ್ಣಾಯಕ ಎಂಬುದು ಈ ಹಿಂದೆ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಬೀತಾಗಿದೆ.

ಈ ಜನಪ್ರತಿನಿಧಿಗಳ ಮತಗಳು ಅಸಿಂಧುವಾಗಲು ಮುಖ್ಯ ಕಾರಣ ಚುಕ್ಕಿ (.) ಮತ್ತು ಉದ್ದರಣೆ (“ “) ಚಿಹ್ನೆಗಳು, ತಮ್ಮ ಆದ್ಯತೆಯ ಮತದ ಸಂಖ್ಯೆಯ ಸುತ್ತ ವೃತ್ತ ಹಾಕಿರುವಿಕೆ, 1 ಸಂಖ್ಯೆಯನ್ನು ಓರೆಯಾಗಿ (1) ಬರೆದಿರುವಿಕೆ ಎಂದು ಮತ ಎಣಿಕೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಯೊಬ್ಬರು ಬಹಿರಂಗಗೊಳಿಸಿದ್ದಾರೆ.
ಮತ ಚಲಾಯಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಶಾಸಕರು ಮತ್ತು ಸಂಸದರಿಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಈ ಲೋಪ-ದೋಷಗಳು ನಡೆದಿರುವುದು ಹಾಸ್ಯಾಸ್ಪದ ಎಂಬಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin