ವಿಶ್ವಕಪ್‍ನ ಕೊನೆಯ ಪಂದ್ಯ ಆಡಲಿರುವ ಮಿಥಾಲಿ, ಜುಲಾನ್ ಗೋಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Mithali-Raj--01

ಲಾಡ್ರ್ಸ್ , ಜು. 23- ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್‍ನಲ್ಲಿ ಇಂದು ಟೀಂ ಇಂಡಿಯಾ ಚೊಚ್ಚಲ ಮಹಿಳಾ ವಿಶ್ವಕಪ್ ಮುಕುಟವನ್ನು ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿದ್ದರೆ , ಮತ್ತೊಂದೆಡೆ ಟೀಂ ಇಂಡಿಯಾದ ನಾಯಕ ಮಿಥಾಲಿ ರಾಜ್ ಹಾಗೂ ಹಿರಿಯ ಆಟಗಾರ್ತಿ ಜುಲಾನ್ ಗೋಸ್ವಾಮಿ ಅವರು ವಿಶ್ವಕಪ್‍ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದ ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‍ಗೆ ಅವಿಸ್ಮರಣೀಯ ಪಂದ್ಯವನ್ನಾಗಿಸಿಕೊಟ್ಟ ರೀತಿಯಲ್ಲಿ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕಪ್ ಗೆಲ್ಲುವುದೇ ಅಲ್ಲದೆ ಮಿಥಾಲಿ ಹಾಗೂ ಜುಲಾನ್ ಗೋಸ್ವಾಮಿಗೆ ವಿಶಿಷ್ಟ ರೀತಿಯ ಪಂದ್ಯವಾಗಿಸಲು ಟೀಂ ಇಂಡಿಯಾ ಆಟಗಾರ್ತಿಯರು ಯೋಚಿಸಿದ್ದಾರೆ.

2005ರಲ್ಲಿ ನಡೆದ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಬ್ಲ್ಯೂ ಗಲ್ರ್ಸ್‍ಗಳು 98 ರನ್‍ಗಳಿಂದ ವಿರೋಚಿತ ಸೋಲು ಕಂಡಿದ್ದರೂ ಕೂಡ ಇಂದಿನ ಚಿತ್ರಣವನ್ನೇ ಬದಲಾಗಿದ್ದು ಇಂದಿನ ಪಂದ್ಯವನ್ನು ಗೆಲ್ಲುವ ಹಾಟ್‍ಫೇವರಿಟ್ ತಂಡವಾಗಿ ಭಾರತ ತಂಡವು ಹೊರಹೊಮ್ಮಿದೆ. 2005ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತ ಸೋತಿದ್ದರೂ ಅದಕ್ಕೆ ಪ್ರತೀಕಾರವೆಂಬಂತೆ ಸೆಮಿಫೈನಲ್‍ನಲ್ಲಿ ಆಸೀಸ್ ವಿರುದ್ಧವೇ 36 ರನ್‍ಗಳಿಂದ ಗೆದ್ದಿರುವ ಟೀಂ ಇಂಡಿಯಾ ಇಂದು ತವರಿನ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಲು ಸಜ್ಜಾಗಿದೆ.

ಮಿಥಾಲಿ ಮನನುಡಿ:

2005ರ ವಿಶ್ವಕಪ್‍ನಲ್ಲಿ ಕೇವಲ ಒಬ್ಬ ಆಟಗಾರ್ತಿಯಾಗಿದ್ದ ನಾನು ಇಂದಿನ ವಿಶ್ವಕಪ್ ಪಂದ್ಯದಲ್ಲಿ ನಾಯಕಿಯಾಗಿರುವುದು ನನಗೆ ತುಂಬಾ ಜವಾಬ್ದಾರಿಯಿದ್ದು ಇಂದು ನಡೆಯುವ ಫೈನಲ್ಸ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ದೇಶದ ಕೀರ್ತಿಯನ್ನು ಮೊಳಗಿಸಲು ಇಚ್ಛಿಸಿದ್ದೇವೆ ಆದರೆ ಇಂಗ್ಲೆಂಡ್‍ಗೆ ತವರಿನ ಬೆಂಬಲವಿರುವುದರಿಂದ ಗೆಲುವು ಸುಲಭವೆಂದು ಪರಿಗಣಿಸಲು ಆಗುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭರವಸೆ ಮೂಡಿಸಿರುವ ಕೌರ್:

ಆಸ್ಟ್ರೇಲಿಯಾದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದಾಖಲೆ ಅಜೇಯ 171ರನ್‍ಗಳನ್ನು ಗಳಿಸಿದ್ದ ಹರ್ಮನ್‍ಪ್ರೀತ್ ಕೌರ್‍ರನ್ನು ಇಂದಿನ ಪಂದ್ಯದಲ್ಲೂ ಮೇಲ್ಪಂಕ್ತಿಯಲ್ಲಿ ಬ್ಯಾಟಿಂಗ್‍ಗೆ ಕಳುಹಿಸುವ ಇರಾದೆ ಇದೆ. ಅಲ್ಲದೆ ಆರಂಭಿಕ ಆಟಗಾರ್ತಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವೇದಾಕೃಷ್ಣಮೂರ್ತಿ ತಂಡಕ್ಕೆ ಆಸರೆಯಾಗಿರುವುದರಿಂದ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಲಿದ್ದಾರೆ ಎಂದು ಮಿಥಾಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಇನ್ನು ಬೌಲಿಂಗ್‍ನಲ್ಲೂ ಕೂಡ ತಂಡ ಬಲಿಷ್ಠವಾಗಿದ್ದು ಹಿರಿಯ ಆಟಗಾರ್ತಿ ಜುಲಾನ್ ಗೋಸ್ವಾಮಿ, ದೀಪ್ತಿಶರ್ಮಾ, ರಾಜೇಶ್ವರಿ ಗಾಯಕ್‍ವಾಡ್, ಪೂನಂ ಯಾದವ್ ಅವರು ಉತ್ತಮ ಲಯದಲ್ಲಿ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ಆಸರೆಯಾಗಿರುವುದರಿಂದ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಮುಕುಟವನ್ನು ಗೆದ್ದುಕೊಡುವುದಾಗಿ ಮಿಥಾಲಿ ತಿಳಿಸಿದ್ದಾರೆ.  ಅಲ್ಲದೆ ಇದು ವಿಶ್ವಕಪ್‍ನಲ್ಲಿ ನನ್ನ ಬಹುತೇಕ ಕೊನೆಯ ಪಂದ್ಯವಾಗಿರುವುದರಿಂದ ಇಂದಿನ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಯೋಚಿಸಿದ್ದೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin