ವಿಶ್ವದಲ್ಲೇ ಹೆಚ್ಚು ಉಗ್ರ ಚಟುವಟಿಕೆಗಳು ನಡೆದ ರಾಷ್ಟ್ರಗಳ ಪೈಕಿ ಭಾರತಕ್ಕೆ 3 ನೇ ಸ್ಥಾನ..!

Terrorist-Kashmir

ನವದೆಹಲಿ ,ಜು.23 – ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದನಾ ಚಟುವಟಿಕೆಗಳು ನಡೆದಿರುವ ರಾಷ್ಟ್ರಗಳ ಪೈಕಿ ಭಾರತದ 3ನೇ ಸ್ಥಾನ ಪಡೆದಿದೆ. 2016ರ ವೇಳೆ ದೇಶಾದ್ಯಂತ ಒಟ್ಟು 798 ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ. ವಿಶ್ವದಲ್ಲೆ ಅತ್ಯಂತ ಅಪಾಯಕಾರಿ ರಾಷ್ಟ್ರಗಳೆನಿಸಿರುವ ಇರಾಕ್ ಮತ್ತು ಅಫ್ಘಾನಿಸ್ತಾನಗಳ ನಂತರ ಭಾರತ ಸ್ಥಾನ ಪಡೆದುಕೊಂಡಿದೆ.  ಭಾರತದ ಭದ್ರತೆಗೆ ಸವಾಲಾಗಿ ಪರಿಣಮಿಸಿರುವ ನಕ್ಸಲಿಯರು ವಿಶ್ವದ ಮೂರನೇ ಅಪಾಯಕಾರಿ ಸಂಘಟನೆಯಾಗಿದೆ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಗಮನಿಸಬೇಕಾದ ಅಂಶವೆಂದರೆ ಭಯೋತ್ಪಾದಕರ ಸ್ವರ್ಗ ಎಂದು ಕರೆಸಿಕೊಳ್ಳುವ ಪಾಕಿಸ್ತಾನದಲ್ಲಿ 734 ಭಯೋತ್ಪಾದನಾ ಪ್ರಕರಣಗಳು ನಡೆದಿವೆ. ಅಂದರೆ ಭಾರತಕ್ಕಿಂತಲೂ ಇಲ್ಲಿ ಕಡಿಮೆ ಮಟ್ಟದ ದಾಳಿಗಳು ನಡೆದಿರುವುದು ವಿಶೇಷ.

2016ರಲ್ಲಿ ವಿಶ್ವಾದ್ಯಂತ ಒಟ್ಟು 11,072 ಭಯೋತ್ಪಾದನಾ ಪ್ರಕರಣಗಳು ನಡೆದಿವೆ. 2015ರ ವೇಳೆ ಭಾರತದಲ್ಲಿ 798 ದಾಳಿಗಳು ನಡೆದಿದ್ದವು. ದೇಶದಲ್ಲಿ ನಾಲ್ಕು ರಾಜ್ಯಗಳು ಭಯೋತ್ಪಾದನಾ ಮತ್ತು ನಕ್ಸಲ್ ಚಟುವಟಿಕೆಗಳು ನಡೆದಿರುವ ಘಟನೆಗಳಿಗೆ ಸಾಕ್ಷಿಯಾಗಿವೆ.  ಕಣಿವೆ ರಾಜ್ಯ ಜಮ್ಮುಕಾಶ್ಮೀರ ಶೇಕಡಾ 19 , ನಕ್ಸಲ್ ಪೀಡಿತ ಛತೀಸ್‍ಘಡ ಶೇ.1 , ಮಣಿಪುರ ಶೇ. 12 ಹಾಗೂ ಜಾರ್ಖಂಡ್‍ನಲ್ಲಿ ಶೇ.10ರಷ್ಟು ಭಯೋತ್ಪಾದನಾ ಹಾಗು ನಕ್ಸಲ್ ಚಟುವಟಿಕೆಗಳು ನಡೆದಿವೆ.  ಅಫ್ಘಾನಿಸ್ತಾನ ಮತ್ತು ಇರಾಕ್‍ನಲ್ಲಿ ಅತಿಹೆಚ್ಚು ಭಯೋತ್ಪಾದನಾ ದಾಳಿಗಳು ನಡೆದಿವೆ. ಐಸಿಸ್ ಮತ್ತು ತಾಲಿಬಾನ್ ಉಗ್ರರ ಹಾವಳಿಯಿಂದ ಈ ಎರಡು ರಾಷ್ಟ್ರಗಳಲ್ಲಿ ಭಯೋತ್ಪಾದಕರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಕ್ಸಲೀಯರು ಅಪಾಯಕಾರಿ:

ಇನ್ನು ಭಯೋತ್ಪಾದಕರಂತೆ ನಕ್ಸಲೀಯರು ವಿಶ್ವದಲ್ಲೇ ಮೂರನೇ ಅಪಾಯಕಾರಿ ಸಂಘಟನೆ ಎಂದು ಎಚ್ಚರಿಸಲಾಗಿದೆ. ಆರ್ಥಿಕ ಅಸಮಾನತೆ, ಸಮಾನತೆಗಾಗಿ ಹೋರಾಟ ನಡೆಸುತ್ತಿರುವ ನಕ್ಸಲೀಯರು ದೇಶದ ಭದ್ರತೆಗೆ ಸವಾಲಾಗಿದ್ದಾರೆ.  ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ಹಾವಳಿಯಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಜಾರ್ಖಂಡ್, ಮಣಿಪುರ ಹಾಗೂ ಛತ್ತೀಸ್‍ಘಡದಲ್ಲೂ ನಕ್ಸಲೀಯರು ಉಪಟಳದಿಂದಾಗಿ ಅಭಿವೃದ್ದಿ ಕುಂಠಿತವಾಗಿದೆ ಎಂದು ವರದಿ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin