3 ವರ್ಷಗಳ ಹಿಂದೆ ಅಪಹರಣಕ್ಕೊಳಗಾದ 39 ಭಾರತೀಯರು ಮೊಸುಲ್ ಜೈಲಿನಲ್ಲಿ…?

ಈ ಸುದ್ದಿಯನ್ನು ಶೇರ್ ಮಾಡಿ

39-Indians

ನವದೆಹಲಿ, ಜು.23-ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಪ್ರಾಬಲ್ಯವಿದ್ದ ಇರಾಕ್‍ನ ಮೊಸುಲ್‍ನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಅಪಹೃತವಾಗಿದ್ದ 39 ಭಾರತೀಯರ ಬಗ್ಗೆ ಈವರೆಗೆ ಯಾವುದೇ ಸೂಕ್ತ ಸುಳಿವು ಲಭ್ಯವಾಗಿಲ್ಲ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆಯಾದರೂ ಯಾವುದೇ ಫಲಶ್ರುತಿ ಕಂಡುಬಂದಿಲ್ಲ. ಆದರೆ ಅವರು ಬದುಕುಳಿದಿರುವ ಆಶಾಭಾವನೆ ಮಾತ್ರ ವ್ಯಕ್ತವಾಗಿದೆ. ಇರಾಕ್‍ನ ಎರಡನೇ ಅತಿ ದೊಡ್ಡ ಪಟ್ಟಣವಾದ ಮೊಸುಲ್‍ನಲ್ಲಿ 39 ಭಾರತೀಯರು ಕಳೆದ ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಇವೆರಲ್ಲರೂ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಪಂಜಾಬ್‍ನವರು.
ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಅಪಹೃತರ ಕುಟುಂಬಗಳನ್ನು ಭೇಟಿ ಮಾಡಿ ಸಂತೈಸಿದರು. ಮೊಸುಲ್ ಬಳಿ ಇರುವ ಬದುಶ್ ಜೈಲಿನಲ್ಲಿ ಕಾರ್ಮಿಕರು ಇದ್ದಾರೆ ಎನ್ನಲಾದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಲಭಿಸಿದೆ. ಅದನ್ನು ಖಚಿತಪಡಿಸಿಕೊಂಡು ಅವರ ಬಿಡುಗಡೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.  ಮೊಸುಲ್‍ನನ್ನು ಐಎಸ್ ಉಗ್ರರ ಹಿಡಿತದಿಂದ ಮರು ವಶಪಡಿಸಿಕೊಳ್ಳಲು ಇರಾಕ್ ಪಡೆಗಳು ಭಯೋತ್ಪಾದಕರೊಂದಿಗೆ ನಿರಂತರ ಹೋರಾಟ ನಡೆಸಿದ್ದರು. ಇತ್ತೀಚೆಗೆ ಇರಾಕಿ ಪಡೆಗಳು ಆ ಪಟ್ಟಣವನ್ನು ವಶಪಡಿಸಿಕೊಂಡಿದ್ದು, ಯಥಾಸ್ಥಿತಿಗೆ ಮರಳಿಸುತ್ತಿರುವ ಕಾರಣ ಭಾರತೀಯರ ಬಗ್ಗೆ ಸದ್ಯದಲ್ಲೇ ಸ್ಪಷ್ಟ ಮಾಹಿತಿ ಲಭಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin