5 ಮಂದಿಯನ್ನು ವಿಕೃತವಾಗಿ ಮಚ್ಚಿನಿಂದ ಕೊಚ್ಚಿ ಕೊಂದಿದ್ದ ಅಪರಾಧಿಗೆ ಮರಣದಂಡನೆ ಶಿಕ್ಷೆ

Murder-Kollegala--01

ಕೊಳ್ಳೇಗಾಲ, 2015 ಮೇ 11 ರಂದು ತಡರಾತ್ರಿ ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾಮದ ತೋಟದ ಮನೆಯಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಐದು ಮಂದಿಯನ್ನು ವಿಕೃತವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಹಂತಕನಿಗೆ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದು ಜಿಲ್ಲೆಯ ಇತಿಹಾಸದಲ್ಲೆ ಮೊದಲ ಮರಣದಂಡನೆ ತೀರ್ಪು ಇದಾಗಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲ್ಲೂಕಿನ ಪೆರಿಯಾರ್‍ನಗರದ ಮುರುಗೇಶ್ ಎಂಬ ಕಾಮುಕ ಹಂತಕನಿಗೆ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಲಕ್ಷ್ಮಣ ಎಫ್ ಮಳವಳ್ಳಿರವರು ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರವಲಯದಲ್ಲಿರುವ ಹರಳೆ ಗ್ರಾಮದ ಮಹಾದೇವಮ್ಮರವರ ತೋಟದ ಮನೆಯಲ್ಲಿ. ಇಲ್ಲಿನ ಕುಂತೂರು ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯಲೆಂದು ದೂರದ ತಮಿಳುನಾಡಿನಿಂದ ಬಂದ್ದಿದ್ದಂತಹ ಈರೋಡ್ ಜಿಲ್ಲೆ ಹಂದಿಯೂರು ತಾಲ್ಲೂಕಿನ ಜಿ.ಎಸ್ ಕಾಲೋನಿ ಪೊಸ್ಟ್‍ನ ಪಾಲೈ ಕೊಟ್ಟೈ ಗ್ರಾಮದ ರಾಜೇಂದ್ರ(38), ಆತನ ಪ್ರೇಯಸಿ ಗುಡ್ಡೆಯೂರಿನ ಲೇ.ಕಣ್ಣ ಎಂಬುವವನ ಪತ್ನಿ ರಾಜಮ್ಮ(35). ಆಕೆಯ ಪುತ್ರಿ ರೋಜ(8), ಸತ್ಯಮಂಗಲ ತಾಲ್ಲೂಕು ಕಡಂಬೂರು ಪೊಸ್ಟ್‍ನ ಮಾಕಂಪಾಳ್ಯ ಗ್ರಾಮದ ಕಾಶಿ ಶಿವಕುಮಾರ್(39), ಆತನ ಪ್ರೇಯಸಿ ಹಾಗೂ ಅದೇ ಗ್ರಾಮದ ಪೆರುಮಾಳ್ ಎಂಬುವವನ ಪತ್ನಿ ಶಿವಮ್ಮ(37) ಎಂಬ ಕಾರ್ಮಿಕರನ್ನು ಕಾಮುಕ ಹಂತಕ ಭೀಕರವಾಗಿ ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದ.

ಕೊಲೆಯಾದವರ ಪೈಕಿ ಮೇಸ್ತ್ರಿ ರಾಜೇಂದ್ರನ್ ಅವಿವಾಹಿತ. ತಮಿಳುನಾಡಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ಕೂಲಿ ಆಳುಗಳನ್ನು ಕರೆತಂದು ಕಬ್ಬು ಕಡಿಸುವ ಕೆಲಸ ಮಾಡಿಸುತ್ತಿದ್ದ. ಆ ಭಾಗದಲ್ಲಿ ಕಬ್ಬು ಕಟಾವು ಮುಗಿದ ನಂತರ 2015 ಏಪ್ರಿಲ್‍ನಲ್ಲಿ ಅವರದೇ ಒಡೆತನದ ಕೊಳ್ಳೇಗಾಲ ತಾಲ್ಲೂಕು ಕುಂತೂರಿಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯುವ ಕೆಲಸಕ್ಕೆ ಸುಮಾರು 30 ಮಂದಿಯ ಕೂಲಿ ಆಳುಗಳ 2 ತಂಡವನ್ನು ಕರೆತಂದಿದ್ದ. ಒಂದು ತಂಡ ಪಕ್ಕದ ಗ್ರಾಮವೊಂದರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರೆ. ಮೇಸ್ತ್ರಿ ರಾಜೇಂದ್ರ ಹಾಗೂ ಕೊಲೆಯಾಗಿರುವ 5 ಮಂದಿ ಸೇರಿದಂತೆ ಸುಮಾರು 15 ಮಂದಿಯ ತಂಡ ಹರಳೆ ಗ್ರಾಮದಲ್ಲಿರುವ ಮುದ್ದು ಮಾದೇಗೌಡ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಿಕೊಂಡು ಅದೇ ಗ್ರಾಮದ ಮಹದೇವಮ್ಮ ಎಂಬುವವರ ತೋಟದ ಮನೆಯ ಶೆಡ್‍ನಲ್ಲಿ ಉಳಿದುಕೊಂಡಿತ್ತು.

ಹಂತಕ ಮುರಗೇಶ್ ಸೇಲಂ ಜಿಲ್ಲೆಯ ಮೆಟ್ಟೂರು ತಾಲ್ಲೂಕಿನ ಗೋವಿಂದ ಪಾಡಿಯ ಆಂಡಿಯಪ್ಪನ್ ಪೊನ್ನಯ್ಯನ ಮಗ. ಹಂತಕ ಮುರುಗೇಶನ ಹೆಂಡತಿ ಪಾಪು ಇವರಿಗೆ ಇಬ್ಬರು ಗಂಡು ಮಕ್ಕಳು ಮೊದಲ ಮಗ ಪ್ರಕಾಶ ದ್ವಿತಿಯ ಪಿಯುಸಿ ಓದಿದ್ದಾನೆ. ಎರಡನೆ ಮಗ ರಮೇಶ ಜೆ.ಸಿ.ಬಿ ಚಾಲಕ ಆದರೆ ಆರೋಪಿ ಮುರುಗೇಶ ತನ್ನ ಹೆಂಡತಿ ಮಕ್ಕಳೊಡನಿರಲಿಲ್ಲ ಕಾರಣ ಕ್ರಿಮಿನಲ್ ಹಿನ್ನೆಲೆಯುಳ್ಳ ಈತ ಪೊಲಿಸರ ತಪ್ಪಿಸಿಕೊಳ್ಳಲು ಕಳೆದ 15 ವರ್ಷಗಳ ಹಿಂದೆಯೇ ಹೆಂಡತಿ ಮಕ್ಕಳನ್ನು ತೊರೆದು ಮನೆ ಬಿಟ್ಟಿದ್ದ.

ಈತನ ಮೇಲೆ ಕೊಲೆ ಆರೋಪದ ಸಾಕಷ್ಟು ಪ್ರಕರಣಗಳಿದ್ದು ಕರ್ನಾಟಕ ಹಾಗೂ ತಮಿಳುನಾಡಿನ ಪೊಲೀಸರಿಗೆ ಈತ ಬೇಕಾದವನಾಗಿದ್ದ. ತಮಿಳುನಾಡಿನ ಬರಗೂರು ಪೊಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣ ಹಾಗೂ ಕಳೆದ 2014 ರಲ್ಲಿ ಕೊಳ್ಳೇಗಾಲ ತಾಲ್ಲೂಕು ರಾಮಾಪುರ ಪೊಲಿಸ್ ಠಾಣಾ ವ್ಯಾಪ್ತಿಯ ನಾಲ್‍ರೋಡ್ ಬಳಿ ಕೊಲೆಯಾದ ಮಾದಯ್ಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಾಗಿ ಈತ ಮನೆ-ಮಠ ಹೆಂಡತಿ ಮಕ್ಕಳನ್ನು ಬಿಟ್ಟು ಊರೂರು ಅಲೆಯುತ್ತಿದ್ದ. ಅಲ್ಲಿ ಇಲ್ಲಿ ಕೂಲಿ ಮಾಡಿಕೊಂಡು ಪೊಲಿಸರ ಕಣ್ತಪ್ಪಿಸಿ ಅಲೆಯುತ್ತಿದ್ದ ಮುರುಗೇಶ ಕೊನೆಗೆ ಬಂದು ಸೇರಿದ್ದು ಮೇಸ್ತ್ರಿ ರಾಜೇಂದ್ರ ಬಳಿ. ರಾಜೇಂದ್ರನ ಬಳಿ ಕಬ್ಬು ಕಡಿಯುವ ಕೆಲಸಕ್ಕೆ ಸೇರಿದ್ದ ಮುರುಗೇಶ ನೆಟ್ಟಗಿದ್ದನೇ ಅಲ್ಲಿ ಕೂಲಿ ಕೆಲಸಕ್ಕೆಂದು ಬರುತ್ತಿದ್ದ ಅಮಾಯಕ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಸತ್ಯಮಂಗಲ ತಾಲ್ಲೂಕಿನ ಪೊಂಗಾಡಿ ಗ್ರಾಮದ ರಂಗ ರಂಗಸ್ವಾಮಿ ಎಂಬ ದೂರದ ಸಂಬಂದಿ ಮುರುಗೇಶನಿಗೆ ಜೊತೆಯಾದ. ಈ ಇಬ್ಬರು ಸೇರಿ ತಮ್ಮೊಡನೆ ಕಬ್ಬು ಕಡಿಯುವ ಕೆಲಸಕ್ಕೆ ಬರುತ್ತಿದ್ದ ಹೆಣ್ಣು ಮಕ್ಕಳನ್ನು ಮುಕ್ಕುತ್ತಿದ್ದರು. ಕೆಲವು ಗೌರವಸ್ಥ ಹೆಣ್ಣು ಮಕ್ಕಳನ್ನು ಕೆಣಕಿ ಉಗಿಸಿಕೊಂಡು ಒದೆ ತಿಂದಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯುವ ಕೆಲಸಕ್ಕೆ ಬಂದಿದ್ದ ವೇಳೆ ಎಲ್ಲರೂ ಹರಳೆ ಗ್ರಾಮದ ಮಹದೇವಮ್ಮ ಎಂಬುವವರ ತೋಟದ ಮನೆಯ ಶೆಡ್‍ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಮುರುಗೇಶ ಕಳೆದ 15 ವರ್ಷಗಳ ಹಿಂದೆಯೇ ಹೆಂಡತಿ ಮಕ್ಕಳನ್ನು ತೊರೆದು ಮನೆ ಬಿಟ್ಟಿದ್ದ. ಮುರುಗೇಶ ಹಾಗೂ ರಂಗಸ್ವಾಮಿ ಇಬ್ಬರು ಕೊಲೆಯಾಗಿರುವ ರಾಜಮ್ಮ ಹಾಗೂ ಶಿವಮ್ಮರವರುಗಳನ್ನು ಲೈಂಗಿಕ ಕ್ರೀಯೆಗೆ ಒತ್ತಾಯಿಸುತ್ತಿದ್ದರು. ಕಾರಣ ಅದಾಗಲೆ ರಾಜಮ್ಮ ಮೇಸ್ತ್ರಿ ರಾಜೇಂದ್ರನೊಡನೆ ಹಾಗೂ ಶಿವಮ್ಮ ಕಾಶಿಯೊಡನೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದರು. ಈ ಬೆಳಗಿನ ವೇಳೆ ಕಬ್ಬು ಕಟಾವು ಮಾಡಿ ಬಂದು ರಾತ್ರಿ ವೇಳೆ ಈ ಎರಡು ಜೋಡಿಗಳು ಒಟ್ಟಿಗೆ ಮಲಗುತ್ತಿದ್ದವು. ರಾಜಮ್ಮನಿಗೆ ಅದಾಗಲೆ ಗಂಡ ತೀರಿಕೊಂಡಿದ್ದ ರಾಜೇಂದ್ರ ಮೊದಲೆ ಅವಿವಾಹಿತ ಇನ್ನೂ ಅದೇ ರೀತಿ ಶಿವಮ್ಮನಿಗೂ ಗಂಡ ಇಲ್ಲ ಕಾಶಿಗೂ ಹೆಂಡತಿಯಿಲ್ಲ ಆಗಾಗಿ ಈ ಜೋಡಿಗಳು ಕಳೆದ 4-5 ವರ್ಷಗಳಿಂದ ಅಕ್ರಮ ಸಂಬಂದವಿದ್ದರಿಂದ ಕಬ್ಬು ಕಟಾವು ಮಾಡಲು ಹೋದ ಕಡೆಯಲ್ಲೆಲ್ಲಾ ರಾಜಾ ರೋಷóವಾಗಿ ಗಂಡ-ಹೆಂಡಿರಂತೆ ನಡೆದು ಕೊಳ್ಳುತ್ತಿದ್ದರು. ಅದು ಅಲ್ಲಿದ್ದ ಎಲ್ಲರಿಗೂ ಗೊತ್ತಿದ್ದ ವಿಚಾರವೇ.

ರಾಜೇಂದ್ರ ಹಾಗೂ ಕಾಶಿರವರು ಮುರುಗೇಶ ಹಾಗೂ ರಂಗಸ್ವಾಮಿಯನ್ನು ಕೇಳಿದ್ದಾರೆ ಈ ಸಂದರ್ಭದಲ್ಲಿ ಮುರುಗೇಶ ಅವರೇನು ನಿವೂ ಕಟ್ಟಿಕೊಂಡ ಹೆಂಡಿರ ಅವರಿಗೆ ಗಂಡನವರಿಲ್ಲ ನಿಮ್ಮ ಜೊತೆ ಮಾತ್ರ ಅವರು ಮಲಗಬಹುದು ನಮ್ಮೊಡನೆ ಬೇಡವೇ? ನಮ್ಮೊಡನೆಯೂ ಮಲಗಲಿ ಎಂದು ಜೋರು ಮಾಡಿದ್ದಾನೆ. ಅದಕ್ಕೆ ರಾಜೇಂದ್ರ ಹಾಗೂ ಕಾಶಿ ಇಬ್ಬರು ನೀನು ಇದೇ ರೀತಿ ಮಾಡಿದರೆ ನಿನ್ನ ಮೇಲೆ ಪೊಲಿಸರಿಗೆ ಕಂಪ್ಲೇಟ್ ಕೊಡ ಬೇಕಾಗುತ್ತದೆ. ಎಂದು ಎಚ್ಚರಿಸಿದ್ದರು. ಅದಕ್ಕೆ ಕಾಶಿ ಕಳೆದ 8-9 ತಿಂಗಳ ಹಿಂದೆ ಇದೇ ರೀತಿ ಒಬ್ಬಾಕೆ ನನ್ನ ಜೊತೆ ಅಕ್ರಮ ಸಂಬಂದ ಇಟ್ಟು ಕೊಳ್ಳದಿದ್ದಕ್ಕೆ ರಾಮಾಪುರ ಸಮೀಪದ ನಾಲ್‍ರೋಡ್ ಬಳಿ ಆಕೆಯ ಗಂಡನನ್ನೆ ಕೊಲೆ ಮಾಡಿದ್ದೆ ಆಗಲೆ ಪೊಲಿಸರು ಏನು ಮಾಡಿಕೊಳ್ಳಲಾಗಲಿಲ್ಲ ಈಗ ಏನು ಮಾಡಿಕೊಳ್ಳುತ್ತಾರೆ ಎಂದು ದಮುಕಿ ಹಾಕಿದ್ದ ಇದು ಈಗೆ ಮುಂದುವರೆದಿತ್ತು.

ಕಬ್ಬು ಕಡಿಯುವ ಆಳುಗಳಿಗೆ ವಾರಕ್ಕೊಮ್ಮೆ ಅಂದರೆ ಪ್ರತಿ ಸೋಮವಾರ ಕಾರ್ಖಾನೆ ಕಡೆಯಿಂದ ಹಣ ಬಟವಾಡೆಯಾಗುತ್ತಿತ್ತು. ಅದೇ ರೀತಿ ಅಂದು 2015 ಮೇ.11 ರ ಸೋಮವಾರ ಕೂಲಿ ಆಳುಗಳಿಗೆಲ್ಲಾ ಕಾರ್ಖಾನೆ ಕಡೆಯಿಂದ ಹಣ ಬಟವಾಡೆಯಾಗಿದೆ ಹಣ ಬಟವಾಡೆಯಾದ ಸಂಭ್ರಮದಲ್ಲಿ ಅಂದು ಎಲ್ಲಾ ಹಬ್ಬ ಆಚರಿಸಿದ್ದಾರೆ. ಚನ್ನಾಗಿ ಕುಡಿದು ತಿಂದಿದ್ದಾರೆ ಕುಡಿದ ಅಮಲಿನಲ್ಲಿ ಮುರುಗೇಶ ಮತ್ತೆ ಆ ಇಬ್ಬರು ಹೆಂಗಸರನ್ನು ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾನೆ. ಆ ವಿಚಾರವಾಗಿ ರಾಜೇಂದ್ರ ಹಾಗೂ ಕಾಶಿ ಮುರುಗೇಶ ಹಾಗೂ ರಂಗಸ್ವಾಮಿರವರ ನಡುವೆ ಗಲಾಟೆ ನಡೆದಿದೆ. ಅಂದು ಸಹ ಮುರುಗೇಶ ಧಮುಕಿ ಹಾಕಿದ್ದಾನೆ. ನಂತರ ಕಾಶಿ ಮತ್ತು ಶಿವಮ್ಮ ತೋಟದ ಮನೆಯ ಶೆಡ್‍ನಲ್ಲೆ ಒಟ್ಟಿಗೆ ಮಲಗಿದ್ದಾರೆ. ಹಾಗೂ ರಾಜೇಂದ್ರ ಹಾಗೂ ರಾಜಮ್ಮ ಪಕ್ಕದಲ್ಲೆ ಇದ್ದ ಮಟ್ಟಾಳೆ ಗುಡಿಸಿಲಿನಲ್ಲಿ ಹೋಗಿ ಮಲಗಿದ್ದಾರೆ.

ಅದಾಗಲೆ ಕಾಮ ಪಿಪಾಸು ಮುರುಗೇಶನಿಗೆ ರಾಜಮ್ಮ ಲೈಂಗಿಕ ಕ್ರೀಯೆಗೆ ನಿರಾಕರಿಸಿದ್ದದ್ದು ಹಾಗೂ ರಾಜೇಂದ್ರ ಹಾಗೂ ಕಾಶಿ ಪೊಲೀಸ್ ಕಂಪ್ಲೇಟ್ ಕೊಡುವುದಾಗಿ ಎಚ್ಚರಿದ್ದನ್ನು ನೆನೆಸಿಕೊಂಡು ವಿಕೃತನಾಗಿದ್ದ. ಕೂಡಲೆ ತನ್ನ ಸಂಬಂಧಿ ರಂಗಸ್ವಾಮಿಯನ್ನು ಕರೆದು ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಅಂದು ತೋಟದ ಮನೆಯೊಳಗೆ ಮಲಗಿದ್ದವರು ಹೊರಗೆ ಬಾರದಂತೆ ಬಾಗಿಲಿಗೆ ಚಿಲಕ ಹಾಕಿದ್ದಾನೆ. ನಂತರ ಅಲ್ಲೆ ಕಬ್ಬು ಕಡಿಯಲು ತಂದಿದ್ದ ಮಚ್ಚು ತೆಗೆದು ರಾಜಮ್ಮ-ರಾಜೇಂದ್ರ ಮಲಗಿದ್ದಲ್ಲಿಗೆ ಬಂದಿದ್ದಾನೆ. ಇಬ್ಬರು ಒಟ್ಟಿಗೆ ಮಲಗಿದ್ದನ್ನು ಕಂಡು ಮತ್ತಷ್ಟು ವಿಕೃತಗೊಂಡ ಮುರುಗೇಶ ತನ್ನ ವಿಕೃತ ಮನಸ್ಸಿಗೆ ಬಂದಂತೆ ಸಿಕ್ಕ-ಸಿಕ್ಕಂತೆ ಕೊಚ್ಚಿದ್ದಾನೆ. ನಂತರ ಕಾಶಿ ಹಾಗೂ ಶಿವಮ್ಮ ಮಲಗಿದ್ದೆಡೆಗೆ ಬಂದು ಅಲ್ಲಿಯು ಅದೇ ರೀತಿ ಕೊಚ್ಚಿದ್ದಾನೆ. ಅಲ್ಲೆ ಪಕ್ಕದಲ್ಲೆ ಮಲಗಿದ್ದ ರಾಜಮ್ಮಳ 8 ವರ್ಷದ ಮಗಳು ರೋಜಾಳನ್ನು ಕೊಚ್ಚಿ ಕೊಂದಿದ್ದಾನೆ. ಅಲ್ಲಿಗೆ 5 ಜೀವಗಳು ಮುರುಗೇಶನ ವಿಕೃತಿಗೆ ಬಲಿಯಾಗಿವೆ.

ಮೇ. 12 ರಂದು ಮಂಗಳವಾರ ಬೆಳಿಗ್ಗೆ ತೋಟದ ಮನೆಯಲ್ಲಿ ಮಲಗಿದ್ದ ಮಾಲಿಕ ಸಿದ್ದರಾಜು ಎದ್ದು ಬಗಿಲು ಎಳೆದಿದ್ದಾನೆ. ಬಾಗಿಲು ಚಿಲಕ ಹಾಕಿರುವುದು ಕಂಡು ಬಂದಿದೆ. ಕೂಡಲೆ ಆತನ ತಮ್ಮ ಶೇಖರ್ ಎಂಬುವವನಿಗೆ ಮೋಬೈಲ್ ನಿಂದ ಕರೆಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ತೋಟದ ಮನೆ ಬಳಿ ಬಂದ ಶೇಖರ್‍ಗೆ 5 ಮಂದಿ ಕೊಲೆಯಾಗಿ ಬಿದ್ದರುವುದು ಈ ಬೀಕರ ದೃಶ್ಯ ಕಂಡು ಬಂದಿದೆ ಇದನ್ನು ಕಂಡು ಹೆದರಿದ ಶೇಖರ್ ಕೂಡಲೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಪೊಲಿಸರಾದ ಸಿ.ಪಿ.ಐ ಅಮರನಾರಾಯಣ್ ಗ್ರಾಮಾಂತರ ಠಾಣೆ ಅಂದಿನ ಪಿ.ಎಸ್.ಐ ಮೋಹಿತ್ ಸಹದೇವ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ತೋಟದ ಮಾಲಿಕ ಶೇಖರ್ ನೀಡಿದ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಳ್ಳೇಗಾಲ ಅಂದಿನ ಡಿ.ವೈ.ಎಸ್.ಪಿ ವೆಂಕಟರಮಣಪ್ಪರವರ ನೇತೃತ್ವದಲ್ಲಿ ಸಿ.ಪಿ.ಐ ಗಳಾದ ಅಮರನಾರಾಯಣ್ ಮಹದೇವಪ್ಪ ಹಾಗೂ ಇನ್ನಿತರರನ್ನೊಳಗೊಂಡ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು ಘಟನೆ ನಡೆದ 24 ಗಂಟೆಯೊಳಗೆ ಪ್ರಕರಣದ ಪ್ರಮುಖ ಆರೋಪಿ ಮುರುಗೇಶ್‍ನನ್ನು ಬಂಧಿಸಿ ನಾಯಾಲಯಕ್ಕೆ ಹಾಜರು ಪಡಿಸಿದ್ದರು. ನಿಜಕ್ಕೂ ಅಂದಿನ ಈ ದುರ್ಘಟನೆ ಕೊಳ್ಳೆಗಾಲ ಹಾಗೂ ಸುತ್ತ-ಮುತ್ತಲ ಜನತೆಯನ್ನು ಬೆಚ್ಚಿ ಬೀಳಿಸಿತ್ತು.

ಪ್ರಕರಣದ ತನಿಖೆ ಕೈಗೊಂಡಿದ್ದ ಕೊಳ್ಳೇಗಾಲ ಸಿ.ಪಿ.ಐ ಅಮರನಾರಾಯಣ್ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಪ್ರಕರಣವೆಂದು ಪರಿಗಣಿಸಿದ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ ವೇಳೆ ಆರೋಫಿ ಮುರುಗೇಶ್ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾದೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿರವರು ಹಂತಕ ಆರೋಪಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಟಿ.ಹೆಚ್ ಲೋಲಾಕ್ಷಿ ವಾದ ಮಂಡಿಸಿದ್ದರು. ಕೊಲೆಗೆ ಸಹಕರಿಸಿದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲಿಸರು ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin