ಕಾಬೂಲ್ ನಲ್ಲಿ ಕಾರ್ ಬಾಂಬ್ ದಾಳಿಗೆ 24 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Car-Bomb--01

ಕಾಬೂಲ್, ಜು.24- ಉಗ್ರಗಾಮಿಗಳ ಸರಣಿ ದಾಳಿಯಿಂದ ನಲುಗುತ್ತಿರುವ ಆಫ್ಘಾನಿಸ್ತಾನದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಕಾಬೂಲ್‍ನ ಪಶ್ಚಿಮ ಭಾಗದಲ್ಲಿ ಇಂದು ಬೆಳಗ್ಗೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 24 ಮಂದಿ ಮೃತಪಟ್ಟಿ, 42ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಣಿ ಸಚಿವಾಲಯದ ಸರ್ಕಾರಿ ನೌಕರರನ್ನು ಕೊಂಡೊಯ್ಯುತ್ತಿದ್ದ ಬಸ್‍ನನ್ನು ಗುರಿಯಾಗಿಟ್ಟುಕೊಂಡು ಈ ಭಯಾನಕ ದಾಳಿ ನಡೆಸಲಾಗಿದೆ ಎಂದು ಗೃಹ ಸಚಿವಾಲಯ ವಕ್ತಾರ ನಜೀಬ್ ಡಾನಿಶ್ ತಿಳಿಸಿದ್ದಾರೆ.

ಈ ಕಾರ್ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದನೆ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವಿಧ್ವಂಸಕ ಆಕ್ರಮಣಗಳನ್ನು ನಡೆಸುತ್ತಿರುವ ತಾಲಿಬಾನ್ ಉಗ್ರರೇ ಈ ಕೃತ್ಯ ನಡೆಸಿರುವುದು ಬಹುತೇಕ ಖಚಿತವಾಗಿದೆ.  ಆಫ್ಘಾನಿಸ್ತಾನದಾದ್ಯಂತ ಭದ್ರತಾ ಪಡೆಗಳು ನಡೆಸಿ ಬಿರುಸಿನ ಕಾರ್ಯಾಚರಣೆ ಯಲ್ಲಿ 56 ಉಗ್ರರನ್ನು ಕೊಂದು ಇತರ 30 ಬಂಡುಕೋರರನ್ನು ತೀವ್ರ ಗಾಯ ಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಈ ಮಾರಣಹೋಮ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ವೈರಿಗಳಿಂದ ಕೆಲವು ಪ್ರದೇಶಗಳನ್ನು ಮುಕ್ತಗೊಳಿಸಲು ಕಳೆದ 48 ಗಂಟೆಗಳ ಅವಧಿಯಲ್ಲಿ ಅಫ್ಘನ್ ನ್ಯಾಷನಲ್ ಸೆಕ್ಯೂರಿಟಿ ಮತ್ತು ರಕ್ಷಣಾ ಪಡೆಗಳು ತೆರವು ಕಾರ್ಯಚರಣೆಗಳನ್ನು ಕೈಗೊಂಡವು. ಈ ಸೇನಾ ಉಪಕ್ರಮದಲ್ಲಿ 56 ಶಸ್ತ್ರಸಜ್ಜಿತ ಉಗ್ರರು ಹತರಾದರು ಎಂದು ಸಚಿವಾಲಯ ನಿನ್ನೆಯಷ್ಟೇ ತಿಳಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin