ಜನವರಿಯಿಂದ ಈವರೆಗೆ ಹಂದಿಜ್ವರಕ್ಕೆ 600 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

swine-flu

ನವದೆಹಲಿ, ಜು.24- ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನವರಿಯಿಂದ ಈವರೆಗೆ ಹಂದಿಜ್ವರಕ್ಕೆ(ಎಚ್1ಎನ್1) 600 ಮಂದಿ ಮೃತಪಟ್ಟಿದ್ದು, 12,500 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.  ಕಳೆದ ವರ್ಷದ ಅವಧಿಗೆ ಹೋಲಿಸಿದಲ್ಲಿ ಸಾವಿನ ಸಂಖ್ಯೆಯಲ್ಲಿ ದ್ವಿಗುಣವಾಗಿದೆ. ದೇಶದಲ್ಲಿ ಹಂದಿಜ್ವರದಿಂದ ಸಂಭವಿಸಿದ ಸಾವುಗಳಲ್ಲಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಿಂದಲೇ ವರದಿಯಾಗಿದೆ. ಈ ವರ್ಷದ ಜುಲೈ 9ರವರೆಗೆ ವರದಿಯಾದ 2,324 ಹಂದಿಜ್ವರ ಪ್ರಕರಣಗಳಲ್ಲಿ 284 ಸಾವುಗಳು ಅಲ್ಲಿ ಸಂಭವಿಸಿವೆ ಎಂದು ಸಚಿವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಗುಜರಾತ್‍ನಲ್ಲಿ 75 ಸಾವುಗಳು(289 ಸೋಂಕು ಪ್ರಕರಣಗಳು), ಕೇರಳದಲ್ಲಿ 63 (1,127), ರಾಜಸ್ತಾನದಲ್ಲಿ 59(407), ಕರ್ನಾಟಕದಲ್ಲಿ 15(2,277), ತೆಲಂಗಾಣದಲ್ಲಿ 17(1,443) ಹಾಗೂ ತಮಿಳುನಾಡಿನಲ್ಲಿ 15(2,896) ಸಾವುಗಳು ಎಚ್1ಎನ್1 ವೈರಾಣು ಸೋಂಕಿನಿಂದ ಸಂಭವಿಸಿವೆ ಎಂಧು ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.   ಈ ವರ್ಷದಲ್ಲಿ ಈವರೆಗೆ 12,460 ಹಂದಿಜ್ವರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷದ ಈ ಅವಧಿಯಲ್ಲಿ 1,786 ಎಚ್1ಎನ್1 ಕೇಸ್‍ಗಳು ವರದಿಯಾಗಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin