ಟೊಮ್ಯಾಟೊ ಮೇಲೆ ಕಳ್ಳರ ಕಣ್ಣು, ಕಂಗಾಲಾದ ಕೋಲಾರದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Tomato--01

ಕೋಲಾರ,ಜು.24- ಈಗ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ನೋಡಿದರೂ ಟೊಮ್ಯಾಟೊ ಹಣ್ಣಿನದ್ದೇ ಸುದ್ದಿ. ಕಳೆದ ನಾಲ್ಕೈದು ವರ್ಷಗಳಿಂದ ಸತತ ಬರಗಾಲದ ನಡುವೆಯೂ ಕೊಳವೆ ಬಾವಿ ನೆರವಿನಿಂದ ಜಿಲ್ಲೆಯ ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆವರು ಸುರಿಸಿ ಟೊಮ್ಯಾಟೊ ಬೆಳೆದಿದ್ದಾರೆ. ಅದೃಷ್ಟಕ್ಕೆ ಒಳ್ಳೆಯ ಬೆಲೆಯೂ ಇದೆ. ಆದರೆ ಈಗ ಬೆಳೆದ ಟೊಮ್ಯಾಟೊ ಹಣ್ಣನ್ನು ಕಳ್ಳರ ಕೈಯಿಂದ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಟೊಮ್ಯಾಟೊ ಹಣ್ಣು ಮಾರುಕಟ್ಟೆಯಲ್ಲಿ 80-100 ರೂ.ಗೆ ಏರುತ್ತಿದ್ದಂತೆ ಈಗ ಕಳ್ಳರ ಕಣ್ಣು ಬೆಳೆದ ಟೊಮ್ಯಾಟೊ ಹಣ್ಣಿನ ಮೇಲೆ ಬಿದ್ದಿದೆ.

ನಿನ್ನೆ ರಾತ್ರಿ ಕೂಡ ಮಾರುಕಟ್ಟೆಗೆ ಸಾಗಿಸಲು ರೈತರು ಹೊಲಗಳಲ್ಲಿ ಬಾಕ್ಸ್‍ಗಳಲ್ಲಿ ತುಂಬಿಟ್ಟಿದ್ದ ಹಣ್ಣುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಬಾಕ್ಸ್‍ಗಳನ್ನು ಬಿಸಾಡಿ ಹಣ್ಣನ್ನು ವಾಹನಗಳಲ್ಲಿ ತುಂಬಿಕೊಂಡು ಸಾಗಿಸಲಾಗಿದೆ. ಇಲ್ಲಿನ ಟೊಮ್ಯಾಟೊ ಗುಣಮಟ್ಟದ್ದಾಗಿದ್ದು ಉತ್ತರ ಭಾರತ ಮತ್ತು ಬಾಂಗ್ಲಾದೇಶಗಳಿಗೆ ರವಾನೆಯಾಗುತ್ತದೆ. ಕೋಲಾರದ ಮಣ್ಣಲ್ಲಿ ಬೆಳೆದ ಟೊಮ್ಯಾಟೊ 20-25 ದಿನಗಳು ಬಾಳಿಕೆ ಬರುವುದರಿಂದ ಈ ಹಣ್ಣಿಗೆ ಭಾರೀ ಡಿಮ್ಯಾಂಡಿದೆ.
ತಮಿಳುನಾಡು, ಆಂಧ್ರಗಳಲ್ಲಿ ಬೆಳೆಯುವ ಟೊಮ್ಯಾಟೊ ಬೇಗ ಹಾಳಾಗುವುದರಿಂದ ವರ್ತಕರು ಕೋಲಾರದ ಹಣ್ಣನ್ನೇ ಇಷ್ಟಪಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್‍ಗೆ ಸಾವಿರದ 1,100 ರೂಗೆ ಮಾರಾಟವಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin