ನೇಣು ಬಿಗಿದುಕೊಂಡು ಸಾಫ್ಟ್ ವೇರ್ ಎಂಜಿನಿಯರ್‍ ಆತ್ಮಹತ್ಯೆ

sucide

ಬೆಂಗಳೂರು, ಜು.24-ಸಾಫ್ಟ್ ವೇರ್ ಎಂಜಿನಿಯರ್‍ರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.   ಅಗ್ರಹಾರ ದಾಸರಹಳ್ಳಿಯ 9ನೆ ಕ್ರಾಸ್, ಮೊದಲನೆ ಮುಖ್ಯರಸ್ತೆಯ ಕಾವೇರಿ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಶರತ್‍ಕುಮಾರ್(26)ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‍ವೇರ್ ಎಂಜಿನಿಯರ್.  ಫೆಬ್ರವರಿ ತಿಂಗಳಿನಲ್ಲಿ ಶರತ್‍ಕುಮಾರ್ ಅವರ ವಿವಾಹವಾಗಿದ್ದು, ಪತ್ನಿ ತವರು ಮನೆಗೆ ಹೋಗಿದ್ದರು.
ರಾತ್ರಿ ಊಟ ಮಾಡಿ ತಮ್ಮ ರೂಂಗೆ ಮಲಗಲು ಹೋದ ಶರತ್‍ಕುಮಾರ್ ಬೆಳಗಾಗುವಷ್ಟರಲ್ಲಿ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಷಕರು ಬೆಳಗ್ಗೆ ಈತನನ್ನು ಎಬ್ಬಿಸಲು ಕೊಠಡಿ ಬಳಿ ಹೋದಾಗಲೇ ಶರತ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.  ಈ ಸಂಬಂಧ ಮಾಗಡಿರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments