ಪಾಸ್‍ಪೋರ್ಟ್ ಪಡೆಯಲು ಆಧಾರ್ ಸಾಕು

ಈ ಸುದ್ದಿಯನ್ನು ಶೇರ್ ಮಾಡಿ

Passport--01

ನವದೆಹಲಿ, ಜು.24- ಪಾಸ್‍ಪೋರ್ಟ್ ಪಡೆಯಲು ಇನ್ನು ಮುಂದೆ ಜನನ ಪ್ರಮಾಣಪತ್ರದ ಅಗತ್ಯವಿಲ್ಲ. ಹುಟ್ಟಿದ ದಿನಾಂಕದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಲೋಕಸಭೆಯಲ್ಲಿ ಲಿಖಿತ ಪ್ರಶ್ನೊಂದಕ್ಕೆ ನೀಡಿರುವ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಪಾಸ್‍ಪೋರ್ಟ್ ನಿಯಮಗಳು, 1980ರ ಅನ್ವಯ ದಿನಾಂಕ 26-01-1986ರ ನಂತರ ಜನಿಸಿದ ಅರ್ಜಿದಾರರು ಪಾಸ್‍ಪೆಪೋರ್ಟ್‍ಗಾಗಿ ಬರ್ತ್ ಸರ್ಟಿಫಿಕೇಟ್ ಸಲ್ಲಿಸುವುದು ಕಡ್ಡಾಯವಾಗಿತ್ತು. ಆದರೆ, ಈಗ ಅರ್ಜಿದಾರರು ವರ್ಗಾವಣೆ/ಶಾಲೆಯಿಂದ ನಿರ್ಗಮನ/ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಅಥವಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ನೀಡುವ ಜನ್ಮದಿನ ಸಹಿತ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇ-ಆಧಾರ್, ಡ್ರೈವಿಂಗ್ ಲೈಸನ್ಸ್, ಮತದಾರರ ಗುರುತಿನ ಚೀಟಿ, ಎಲ್‍ಐಸಿ ಪಾಲಿಸಿ ಬಾಂಡ್ ಇವುಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಪಾಸ್‍ಪೋರ್ಟ್ ಪಡೆಯಬಹುದಾಗಿದೆ.

ಸರ್ಕಾರ ಉದ್ಯೋಗಿಗಳು ತನ್ನ ಸೇವಾ ದಾಖಲೆ ವಿವರ, ಪಿಂಚಣಿ ದಾಖಲೆ ಇತ್ಯಾದಿಯನ್ನು ನೀಡಬಹುದು.  ಇದರಿಂದ ಇನ್ನು ಮುಂದೆ ಪಾಸ್‍ಪೋರ್ಟ್ ಪಡೆಯುವ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin