ಪ್ರಣಯ್‍’ಗೆ ಒಲಿದ ಯುಎಸ್ ಓಪನ್ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

 

US-Open--01ಅನಹೀಮ್(ಕ್ಯಾಲಿಫೋರ್ನಿಯಾ),ಜು.24- ಅಮೆರಿಕ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‍ನಲ್ಲಿ ಭಾರತದ ಎಚ್.ಎಸ್.ಪ್ರಣಯ್ ಪ್ರಶಸ್ತಿ ಮುಡಿಗೇರಿಸಿದ್ದಾರೆ. ಇಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮೂರು ಬಾರಿ ಪ್ರಶಸ್ತಿಗಳನ್ನು ಗೆದ್ದಿದ್ದ ಭಾರತದವರೇ ಆದ ಬಲಿಷ್ಠ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನು 21-15, 20-22, 21-12 ಸೆಟ್‍ಗಳಿಂದ ಮಣಿಸಿದ ಪ್ರಣಯ್ ಗೆಲುವಿನ ನಗೆ ಬೀರಿದರು. ಇದರೊಂದಿಗೆ 1,20 ಲಕ್ಷ ಡಾಲರ್ ಬಹುಮಾನವನ್ನು ಈ ಪ್ರತಿಭಾವಂತ ಆಟಗಾರ ಗೆದ್ದುಕೊಂಡಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‍ನಲ್ಲಿ ಕಶ್ಯಪ್ ಕೊರಿಯಾ ಕ್ವಾಂಗ್ ಹೀ ಹ್ಯೋ ಅವರನ್ನು 15-21,21-15,21-16ರಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಇನ್ನೊಂದು ಉಪಾಂತ್ಯ ಹಣಾಹಣಿಯಲ್ಲಿ ವಿಯೆಟ್ನಾಂನ ಟೀನ್ ಮಿನ್ ನೂನ್ ಅವರನ್ನು ಪ್ರಣಯ್ 2114,21-19ರಲ್ಲಿ ಸೋಲಿಸಿ ಅಂತಿಮ ಘಟ್ಟಕ್ಕೆ ಬಂದಿದ್ದರು.  ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಹಿಂದಿರುಗಿದ್ದ ಕಶ್ಯಪ್ 21 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದರು. ಕಳೆದ ಬಾರಿ ಸ್ವಿಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪ್ರಣಯ್ ಕೂಡ ಗಾಯದ ಸಮಸ್ಯೆಯಿಂದ ಹೊರಬಂದು ಅಮರಿಕ ಓಪನ್ ಪ್ರಶಸ್ತಿ ಸುತ್ತಿ ಪ್ರವೇಶಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin