ಬಡ ಮಹಿಳೆಯರಿಗೆ ಉಚಿತ ನ್ಯಾಪ್‍ಕಿನ್ ವಿತರಣೆ

Napkin--01

ಬೆಂಗಳೂರು, ಜು.24- ಅಯೋದ್ ಸೇವಾ ಪ್ರತಿಷ್ಠಾನ ವತಿಯಿಂದ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 100ನೆ ಫಲಾನುಭವಿಗೆ ಉಚಿತ ನ್ಯಾಪ್ಕಿನ್ ನೀಡುವ ಮೂಲಕ ವಿಧಾನಪರಿಷತ್ ಸದಸ್ಯೆ ಹಾಗೂ ನಟಿ ತಾರಾ ಅನುರಾಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಉದ್ದೇಶ ಅಯೋದ್ ಪ್ರತಿಷ್ಠಾನ ಹೊಂದಿದೆ. ಪ್ರತಿಯೊಬ್ಬರಿಗೂ ವಾರ್ಷಿಕ 499 ರೂ. ವೆಚ್ಚ ಮಾಡಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ಶಾಂತಿನಗರ ವಿಧಾನಸಭಾ ಕ್ಷೇತ್ರ ಹಾಗೂ ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾ.ಪಂ.ವ್ಯಾಪ್ತಿಯಲ್ಲಿ ಬಡ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ನೀಡಲಾಗುವುದು.

ದೇಶದಲ್ಲಿ ಸುಮಾರು 35.5 ಕೋಟಿ ಋತುಚಕ್ರಕ್ಕೆ ಒಳಗಾಗುವಂತೆ ಮಹಿಳೆಯರಿದ್ದಾರೆ. ಸ್ಯಾನಿಟರಿ ನ್ಯಾಪ್ಕಿನ್ ಬಳಸುವವರು ಶೇ.12.1ರಷ್ಟಿದ್ದು, ಮುಂದಿನ ಹಂತದಲ್ಲಿ ಮರುಬಳಕೆಯ ನ್ಯಾಪ್ಕಿನ್ ನೀಡುವ ಉದ್ದೇಶ ಹೊಂದಿದ್ದು, 2020ರ ವೇಳೆಗೆ 5 ಲಕ್ಷ ಫಲಾನುಭವಿಗಳಿಗೆ ನ್ಯಾಪ್ಕಿನ್ ತಲುಪಿಸಲು ಉದ್ಯಮಿಗಳ ಸಿಎಸ್‍ಆರ್‍ನಿಧಿ ಹಾಗೂ ಸಾರ್ವಜನಿಕರ ದೇಣಿಗೆ ಸಂಗ್ರಹಿಸಲು ಪ್ರತಿಷ್ಠಾನ ನಿರ್ಧರಿಸಿದೆ.ಈ ವೇಳೆ ತಾರಾ ಅನುರಾಧ ಮಾತನಾಡಿ, ಹೆಣ್ಣುಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನ್ಯಾಪ್ಕಿನ್ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಯೋದ್ ಸೇವಾ ಪ್ರತಿಷ್ಠಾನದ ವ್ಯವಸ್ಥಾಪಕ ಪ್ರವೀಣ್‍ನಾಯಕ್, ನ್ಯಾಪ್ಕಿನ್ ಕಾರ್ಯಕ್ರಮದ ಮುಖ್ಯಸ್ಥೆ ಪೂನಂ, ರಂಗಕರ್ಮಿ ಆರ್.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin