ಮಂಪರು ಪರೀಕ್ಷೆಗೆ ಒಳಗಾಗುವೀರಾ…? : ಸಿಎಂ, ಜಾರ್ಜ್‍ಗೆ ರಮೇಶ್ ಸವಾಲ್

NR-Ramesh

ಬೆಂಗಳೂರು, ಜು.24-ಟೆಂಡರ್ ಶ್ಯೂರ್, ವೈಟ್ ಟಾಪಿಂಗ್, ಸ್ಕೈ ವಾಕ್, ರಾಜಕಾಲುವೆ ಪುನಶ್ಚೇತನ ಕಾಮಗಾರಿಗಳು, ಸ್ವೀಪಿಂಗ್ ಮಿಷಿನ್ ಯಂತ್ರಗಳ ಖರೀದಿ ಮತ್ತು ಇಂದಿರಾ ಕ್ಯಾಂಟಿನ್ ನಿರ್ಮಾಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸುವೀರಾ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಇಂದಿರಾ ಕ್ಯಾಂಟಿನ್ ಅವ್ಯವಹಾರ ಕುರಿತಂತೆ ನಾನು ಮಾಡಿರುವ ಆರೋಪವನ್ನು ನೀವು ನಿರಾಕರಿಸಿದ್ದಿರಾ ಈ ಕುರಿತಂತೆ. ನೀವು ಎಲ್ಲಾ ಕಾಮಗಾರಿಗಳನ್ನು ಪಾರದರ್ಶಕವಾಗಿ ಗುತ್ತಿಗೆ ನೀಡಿದ್ದರೆ ಯೋಜನೆಯ ಮುಖ್ಯಸ್ಥ ಅಧಿಕಾರಿಗಳು, ಗುತ್ತಿಗೆದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶ ಬಹಿರಂಗಗೊಳಿಸಿ ಎಂದು ಸವಾಲು ಹಾಕಿದ್ದಾರೆ. ನಾನು ಮಾಡಿರುವ ಆರೋಪಗಳಿಗೆ ಈಗಲೂ ಬದ್ಧನಾಗಿದ್ದೇನೆ. ಒಂದು ವೇಳೆ ನನ್ನ ಆರೋಪ ಸುಳ್ಳಾದರೆ ಬಹಿರಂಗ ಕ್ಷಮೆ ಕೇಳಲು ನಾನು ಸಿದ್ಧ ನೀವು ಮಂಪರು ಪರೀಕ್ಷೆ ನಡೆಸಲು ಸಿದ್ಧರಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಈಗಲೂ ನಿಮ್ಮ ಹೇಳಿಕೆಗೆ ಬದ್ಧರಾಗಿದ್ದರೆ ಪಾಲಿಗ್ರಾಫ್, ಬ್ರೈನ್‍ಮ್ಯಾಪಿಂಗ್ ಅಥವಾ ನಾರ್ಕೊಅನಾಲಿಸಿಸ್ ಪರೀಕ್ಷೆಗೆ ಒಳಗಾಗಲು ತಯಾರಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರಿಗೆ ಎನ್.ಆರ್.ರಮೇಶ್ ಸವಾಲು ಹಾಕಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin