ಮಗಳನ್ನು ಚುಡಾಯಿಸಿದ ಯುವಕನಿಗೆ ಮಲ ತಿನಿಸಿ, ಥಳಿಸಿದ ಪೋಷಕರು..!

MP--01

ಭೂಪಾಲ್, ಜು.24- ಯುವತಿಯನ್ನು ಚುಡಾಯಿಸಿದ್ದಕ್ಕೆ ರೊಚ್ಚಿಗೆದ್ದ ಆಕೆಯ ಮನೆಯವರು ಯುವಕನಿಗೆ ಹಿಗ್ಗಾ-ಮುಗ್ಗಾ ಥಳಿಸಿ ಮಲ ತಿನಿಸಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಶಿವಪುರ್ ಜಿಲ್ಲೆಯ ವಿನೇಗ ಗ್ರಾಮದಲ್ಲಿ ನಡೆದಿದೆ. ಕಲ್ಲುದಾಕಡ್ ಎಂಬಾತ ಹಲ್ಲೆಗೊಳಗಾದ ಯುವಕ.
ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆಕೆ ನನಗೆ ತೋಟದ ಮನೆಯ ಹತ್ತಿರ ಬರುವಂತೆ ಹೇಳಿದ್ದಳು. ಅದರಂತೆ ನಾನು ಭೇಟಿಯಾಗಲು ಹೋಗಿದ್ದೆ. ಇದನ್ನು ನೊಡಿದ ಆಕೆಯ ಪೋಷಕರು ನನ್ನನ್ನು ಮನಬಂದಂತೆ ಥಳಿಸಿ ಬೇಡಿಕೊಂಡರೂ ಬಿಡದೆ ಮಲ ತಿನಿಸಿದರು ಎಂದು ಕಲ್ಲುದಾಕಡ್, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಆಕೆಯ ಪೋಷಕರು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin