ಲೈಂಗಿಕ ನಿಶ್ಯಕ್ತಿಯಿಂದ ಬಳಲುತ್ತಿದ್ದೀರಾ..? ಈ ಮೂಲಿಕೆಯಲ್ಲಿದೆ ಪರಿಹಾರ

Sex-01

ಸೊಗದೆ ಅಥವಾ ನಾಮ ಸೊಗದೆ ಬೇರು ಭಾರತದ ಎಲ್ಲಾ ಪ್ರದೇಶಗಳಲ್ಲಿಯೂ ಬೆಳೆಯುವ ಒಂದು ಅಮೂಲ್ಯವಾದ ಮೂಲಿಕೆ. ಸಂಸ್ಕೃತದಲ್ಲಿ ಸಾರಿವಾ ಎಂದು ಕರೆಯಲ್ಪಡುವ ಈ ಬಳ್ಳಿಯ ರೂಪದ ಸಸ್ಯವನ್ನು ಕರ್ನಾಟಕದ ಕೆಲವೆಡೆ ಸುಗಂಧಿ ಬೇರು ಎಂದು ಕರೆಯುತ್ತಾರೆ. ನಮ್ಮ ರಾಜ್ಯದ ಎಲ್ಲಾ ಭಾಗಗಳಲ್ಲಿ ಬೆಳೆದರೂ ಸಹ, ಪಶ್ಚಿಮಘಟ್ಟಗಳು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಸೊಗದೆ ಹುಲುಸಾಗಿ ಬೆಳೆಯುತ್ತದೆ. ಸೊಗದೆ ಬೇರಿನ ಸಸ್ಯ ನೀಳವಾಗಿ ಬೆಳೆದು. ಪೊದೆಗಳು ಹಾಗೂ ಮರಗಳ ಮೇಲೆ ಹಬ್ಬುವ ಬೆಳ್ಳಿ. ಇದರ ಎಲೆ ದಾಳಿಂಬೆ ಎಲೆಯಂತೆ ನೀಳವಾಗಿ ಇದ್ದು, ಎಲೆಯ ಮಧ್ಯಭಾಗದಲ್ಲಿ ಒಂದು ಬಿಳಿನಾಮದಂಥ ಗೆರೆ ಇರುತ್ತದೆ. ಆದುದರಿಂದಲೇ ಇದನ್ನು ನಾಮ ಬೇರು ಎಂತಲೂ ಕರೆಯುತ್ತಾರೆ.

ಇದರ ಎಲೆಯನ್ನು ಕಿತ್ತರೆ ಹಾಲಿನಂತಹ ದ್ರವ ಬರುತ್ತದೆ. ಇದರಿಂದ ಇದನ್ನು ಸಂಸ್ಕೃತದಲ್ಲಿ ದುಗ್ಧಗರ್ಭ ಎಂದೂ ಕರೆಯುತ್ತಾರೆ. ಬೇರು ಭೂಮಿಲ್ಲಿ ಬಹಳ ಆಳವಾಗಿ ಬೆಳೆಯುವುದರಿಂದ ಅನಂತಮೂಲ ಎಂತಲೂ ಕರೆಯುತ್ತಾರೆ. ಸೊಗದೆಯಲ್ಲಿ ಎರಡು ವಿಧ. ಕೃಷ್ಣ ಸಾರಿವಾದಲ್ಲಿ ಬಳ್ಳಿಯ ಕಾಂಡ ಭಾಗ, ಎಲೆಯ ಹಿಂಭಾಗ ಹಾಗೂ ಬೇರುಗಳು ಕಪ್ಪು ಬಣ್ಣದ್ದಾಗಿರುತ್ತವೆ. ಬೇರು ಭೂಮಿಯಲ್ಲಿ ಅತಿ ಆಳವಾಗಿ ಬೆಳೆದಿರುತ್ತವೆ. ಬೇರಿನ ಹೊರ ಪದರವು ಮೃದುವಾಗಿ ಕಪ್ಪಗಾಗಿರುತ್ತದೆ ಮಧ್ಯಭಾಗವು ನಾರಿನಿಂದ ಕೂಡಿದ್ದು, ಸ್ವಲ್ಪ ಗಟ್ಟಿಯಾಗಿರುತ್ತದೆ. ಬೇರು ಒಳ್ಳೆಯ ಸುವಾಸನೆಯಿಂದ ಕೂಡಿರುತ್ತದೆ.

ಆಯುರ್ವೇದ ಗ್ರಂಥಗಳಲ್ಲಿ ಸೊಗದೆ ಬೇರಿನ ಗುಣ ಮತ್ತು ಉಪಯೋಗದ ಬಗ್ಗೆ ದೀರ್ಘ ವಿವರಣೆ ಇದೆ. ಇದು ರಸದಲ್ಲಿ ಮಧುರ ಅಂದರೆ ಸಿಂಹಯಾಗಿದ್ದು, ಕಫ, ವಾತದೋಷಗಳಿಂದ ಬರುವ ರೋಗಗಳಲ್ಲಿ, ರಕ್ತದ ದೋಷಗಳಿಂದ ಉಂಟಾದ ರೋಗಗಳಲ್ಲಿ ವಿಶೇಷವಾಗಿ ಉಪಯೋಗಕ್ಕೆ ಬರುತ್ತದೆ. ಚರ್ಮರೋಗ, ಜ್ವರ, ಮೋಹ ರೋಗಗಳ ನಿವಾರಣೆಗೆ ಉತ್ತಮ ಔಷಧ. ಸ್ತ್ರೀಯರಲ್ಲಿ ಸ್ತನ್ಯ ಅಂದರೆ ಮೊಲೆಹಾಲಿನ ದೋಷವನ್ನು ಹೋಗಲಾಡಿಸಿ ಹಾಲನ್ನು ಶುದ್ಧಿ ಮಾಡುವ ಅಪೂರ್ವಗುಣ ಸೊಗದೆ ಬೇರಿಗೆ ಇದೆ.

ಪುರುಷರ ಶುಕ್ರ ಅಂದರೇ, ವೀರ್ಯದಲ್ಲಿ ಇರುವ ದೋಷವನ್ನು ಹೋಗಲಾಡಿಸಿ, ಇದನ್ನು ಶುದ್ಧ ಮಾಡುವ ಗುಣ ಸಾರಿವಾ ಹೊಂದಿದೆ. ಇದು ಶೀತವೀರ್ಯ ಕಡಿರುವುದರಿಂದ ಪಿತ್ತವನ್ನು ಶಮನಮಾಡುತ್ತದೆ. ದೇಹದಲ್ಲಿ ಉಂಟಾದ ಉಷ್ಣತೆ, ದಾಹವನ್ನು ಹೋಗಲಾಡಿಸಿ, ದೇಹವನ್ನು ತಂಪಾಗಿ ಇಡುತ್ತದೆ.

ಉಪಯೋಗಗಳು :

ಸೊಗದೆಯ ಅತಿ ಉಪಯುಕ್ತವಾದ ಭಾಗ ಅದರ ಬೇರು. ಆದುದರಿಂದಲೇ ಈ ಮೂಲಿಕೆಗೆ ಸೊಗದೆ ಬೇರು ಎಂದೇ ಪ್ರಸಿದ್ಧಿ. ಕಾಡಿನಲ್ಲಿ ತಾನೇ ತಾನಾಗಿ ಬೆಳೆಯುವ ಈ ಸೊಗದೆ ಬೇರನ್ನು ಮುಂಗಾರಿನ ಕೊನೇ ತಿಂಗಳಲ್ಲಿ ಕಿತ್ತು ತಂದು, ನೆರಳಿನಲ್ಲಿ ಒಣಗಿಸಿ ಶೇಖರಿಸಿ ಇಟ್ಟುಕೊಳ್ಳಬೇಕು. ಸುಗಂಧಪೂರಿತವಾದ ಇದು ಅನೇಕ ರೋಗಗಳಿಗೆ ರಾಮಬಾಣ. ಒಣಗಿಸಿದ ಬೇರನ್ನು ಕುಟ್ಟಿ, ಸಣ್ಣಗೆ ಚೂರ್ಣ ಮಾಡಿ, ಸಮಪ್ರಮಾಣದಲ್ಲಿ ಕಲ್ಲುಸಕ್ಕರೆಯನ್ನು ಬೆರೆಸಿ ಇಟ್ಟುಕೊಳ್ಳಬೇಕು. ಇದನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಚೂರ್ಣಕ್ಕೆ ಒಂದು ಚಮಚ ಹಸುವಿನ ತುಪ್ಪ ಬೆರೆಸಿ ತಿಂದು, ಮೇಲೆ ಸುಖೋಷ್ಣವಾದ ಹಾಲವನ್ನು ಕುಡಿಯಬೇಲು. ಇದರಿಂದ ರಕ್ತಶುದ್ಧಿ ಹಾಗೂ ವೃದ್ಧಿ ಆಗುತ್ತದೆ. ವೀರ್ಯವೃದ್ಧಿಯಾಗುತ್ತದೆ. ದೇಹದ ಉಷ್ಣತೆ ಕಡಿಮೆಯಾಗಿ, ಆರೋಗ್ಯ ಸುಧಾರಿಸುತ್ತದೆ. ಚರ್ಮ ಮತ್ತು ಮುಖದ ಕಾಂತಿ ಹೆಚ್ಚುತ್ತದೆ.

ಉಪದಂಶ ಮತ್ತು ಫಿರಂಗ ಎರಡೂ ಹಾನಿಕಾರಕ ಲೈಂಗಿಕ ರೋಗಗಳು. ಲೈಂಗಿಕ ಸ್ವೇಚ್ಛಾಚರಣೆಯಿಂದಾಗಿ ಈ ರೋಗಗಳ ಇಂದಿನ ದಿನಗಳಲ್ಲಿ ಹಾವಳಿ ಹೆಚ್ಚು.
ಸೊಗದೆ ಬೇರು ಈ ರೋಗಗಳಿಗೆ ಬಹು ಶ್ರೇಷ್ಠ ಔಷಧ. ಚೂರ್ಣ, ಕಷಾಯ, ಪಾನಕ, ಆಸವ, ಇತ್ಯಾದಿಗಳ ರೂಪದಲ್ಲಿ ಸೊಗದೆ ಬೇರನ್ನು ಸೇವಿಸಿದರೆ ಅತಿ ಲಾಭವಾಗುತ್ತದೆ.  ಮೇಲಿನ ರೋಗಗಳಿಗೆ ಪಾಶ್ಚಿಮಾತ್ಯ ವೈದ್ಯ ಪದ್ಧತಿಯಲ್ಲಿ ಒಳ್ಳೆಯ ಚಿಕಿತ್ಸೆ ಇದೆ. ಆದರೆ, ಉಪದಂಶ ಮತ್ತು ಫಿರಂಗ ರೋಗಗಳು, ರಕ್ತವನ್ನು ಕೊಡುವುದರಿಂದ ರೋಗದ ಕ್ರಿಮಿಗಳು ನಾಶವಾದರೂ, ಅವು ರಕ್ತದಲ್ಲಿ ಉಂಟು ಮಾಡಿರುವ ವಿಶೇಷ ವಿಷಾಂಶ ಸಂಪೂರ್ಣವಾಗಿ ತೊಡೆದು ಹಾಕಲಾರವು. ಇಂತಹ ಸಮಯದಲ್ಲಿ ಸೊಗದೆ ಬೇರಿನ ಸೇವನೆ ಅತ್ಯಂತ ಪರಿಣಾಮಕಾರಿ. ಇದು ರಕ್ತದಲ್ಲಿರುವ ವಿಷಕ್ರಮಿಹಾಗೂ ವಿಷಾಂಶವನ್ನು ನಾಶವಾಗಿ, ರಕ್ತ ಮತ್ತು ಶುಕ್ರವನ್ನು ಶುದ್ಧಿ ಮಾಡಿ, ರೋಗವನ್ನು ನಿರ್ಮೂಲನೆ ಮಾಡುತ್ತದೆ.

ಚರ್ಮರೋಗ ಚಿಕಿತ್ಸೆ :

ಎಲ್ಲಾ ವಿಧವಾದ ಚರ್ಮ ರೋಗಗಳು ರಕ್ತದ ಅಶುದ್ಧತೆಯಿಂದ ಉಂಟಾಗುತ್ತವೆ ಎಂದು ಆಯುರ್ವೇದ ವೈದ್ಯರ ನಂಬಿಕೆ. ಹಾಗೂ ಅನುಭವ. ಆದುದರಿಂದ ಚಮರೋಗಗಳು ಕೇವಲ ಬಾಹ್ಯ ಚಿಕಿತ್ಸೆಯಿಂದ ಸಂಪೂರ್ಣವಾಗಿ ವಾಸಿಯಾಗುವುದಿಲ್ಲ. ಮುಲಾಮು ಬೇರು ಶ್ರೇಷ್ಠ ಔಷಧಿಯಾಗಿದೆ. ಸೊಗದೆ ಬೇರಿನ ಸೇವನೆಯಿಂದ ರಕ್ತವು ಶುದ್ಧಿಯಾಗುವುದಲ್ಲದೇ ಚರ್ಮ ರೋಗಗಳು ಬುಡ ಸಹಿತ ನಿರ್ಮೂಲವಾಗುತ್ತದೆ. ಈ ರೋಗಗಳಲ್ಲಿಯೂ ಸಹ ರೋಗಿಯ ಪ್ರಕೃತಿಯನ್ನು ಅನುಸರಿಸಿ, ಕಷಾಯ, ಚೂರ್ಣ, ಪಾನಕ ಮುಂತಾದವುಗಳನ್ನು ನಿಯೋಜಿಸಬೇಕಾಗುತ್ತದೆ.

ವಾತರಕ್ತ :

ವಾತರಕ್ತವೂ ಸಹ ರಕ್ತದ ಅಶುದ್ಧತೆಯಿಂದ ಉಂಟಾಗುವ ಒಂದು ರೋಗ. ಸೊಗದೆ ಬೇರು ಈ ರೋಗಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಹೃಷಿಕೇಶದ ಸ್ವಾಮಿ ಶಿವಾನಂದರವರು ಸೊಗದೆ ಬೇರು ರಕ್ತದ ಕ್ಯಾನ್ಸರ್‍ಗೆ ಒಂದು ಶ್ರೇಷ್ಠ ಔಷಧಿ ಎಂದು ಹೇಳಿರುತ್ತಾರೆ. ಇದರ ಬಗ್ಗೆ ಸಂಶೋಧನೆಗೆ ಅವಶ್ಯಕತೆ ಇದೆ.

 ಆಯುರ್ವೇದ ತಜ್ಞ : ಡಾ. ಅಬ್ದುಲ್ ಖಾದರ್ ( Mob :  9845199790 )

< ಆರೋಗ್ಯ ಮತ್ತು ಆಯುರ್ವೇದ ಕುರಿತಾದ ನಿರಂತರ  Eesanje News 24/7 ನ್ಯೂಸ್ ಆ್ಯಪ್ ಸುದ್ದಿಗಳಿಗೆ  ಡೌನ್ಲೋಡ್ ಮಾಡಿಕೊಳ್ಳಿ  >

 Click Here to Download   Android / iOS

Facebook Comments

Sri Raghav

Admin