ಲೋಕಸಭೆಯಲ್ಲಿ ಪ್ರತಿಧ್ವನಿದ ಬೋಫೋರ್ಸ್ ಹಗರಣ, ಸದನ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Loksabha--01

ನವದೆಹಲಿ, ಜು.24- ಬಹುಕೋಟಿ ರೂ.ಗಳ ಬೋಫೋರ್ಸ್ ಪಿರಂಗಿ ಹಗರಣ ಇಂದು ಲೋಕಸಭೆಯಲ್ಲಿ ಪ್ರತಿಧ್ವನಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ, ವಾಗ್ವಾದ ನಡೆದು ಕೋಲಾಹಲ ಉಂಟಾದ ಕಾರಣ ಸದನವನ್ನು ಮುಂದೂಡಲಾಯಿತು. ಪ್ರಶ್ನೋತ್ತರ ಕಲಾಪದ ನಂತರ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಈ ಹಗರಣದಲ್ಲಿ ಇಟಲಿ ಉದ್ಯಮಿ ಓಟ್ಟಾವಿಯೋ ಕೊಟ್ರೋಚಿ ಆರೋಪಿಯಾಗಿದ್ದು, ಈತನಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸಂಪೂರ್ಣ ಸಹಕಾರ, ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಹೇಳಿಕೆಯಿಂದ ಕುಪಿತರಾದ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದಾಗ ಪರಸ್ಪರ ಹೇರಿದ ದನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ರಾಹುಲ್‍ಗಾಂಧಿ ಸದನದಿಂದ ಹೊರ ನಡೆದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಮೀನಾಕ್ಷಿಲಾಖಿ, ರಾಹುಲ್ ಮೌನದ ಬಗ್ಗೆ ಕಿಡಿ ಕಾರಿದರು. ಉಭಯ ಪಕ್ಷಗಳ ಸದಸ್ಯರ ಗದ್ದಲ, ಗಲಭೆ ನಿಯಂತ್ರಣಕ್ಕೆ ಬರದೆ ಕೋಲಾಹಲ ಉಂಟಾದ ಕಾರಣ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸಭೆಯನ್ನು ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin