ವಾಹನ ಸೌಲಭ್ಯವಿಲ್ಲದೆ 16 ಕಿ.ಮೀ ಗರ್ಭಿಣಿಯನ್ನು ಹೊತ್ತು ಸಾಗಿಸಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Pregnent-Women--2

ಭುವನೇಶ್ವರ,ಜು.24- ಒರಿಸ್ಸಾ ರಾಜ್ಯದಲ್ಲಿ ಆರೋಗ್ಯ ಇಲಾಖೆ ಜೀವಂತವಾಗಿದೆ ಎಂಬುದಕ್ಕೆ ಯಾವ ಸೂಚನೆಗಳೂ ಕಂಡು ಬರುತ್ತಿಲ್ಲ. ಇತ್ತೀಚೆಗೆ ಇಲ್ಲಿ ಮನುಕುಲವನ್ನೇ ನಾಚಿಸುವಂತಹ ಘಟನೆಗಳು ಪುನರಾವರ್ತನೆ ಆಗುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದೆ ಆ್ಯಂಬುಲೆನ್ಸ್ ದೊರೆಯದೆ ಆಸ್ಪತ್ರೆಯಿಂದ ಮೃತದೇಹಗಳನ್ನು ಸೈಕಲ್ ಮೇಲೆ, ಹೆಗಲ ಮೇಲೆ ಹೊತ್ತು ಸಾಗಿಸಿದ ಘಟನೆಗಳು ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ಈಗ ರಾಜ್ಯದ ಕಲಹಂಡಿಯ ಗ್ರಾಮವೊಂದರಲ್ಲಿ ಇನ್ನೊಂದು ಪ್ರಕರಣ ನಡೆದಿದೆ.

ಕಲಹಂಡಿಯ ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆಗೆ ಮರವೊಂದು ಉರುಳಿ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. 2 ದಿನ ಕಳೆದರೂ ಅದನ್ನು ತೆರವುಗೊಳಿಸಲಾಗಿಲ್ಲ. ಈ ಸಂದರ್ಭ ಗ್ರಾಮದ ಮಹಿಳೆಯೊಬ್ಬರನ್ನು ಹೆರಿಗೆಗಾಗಿ 16 ಕಿ.ಮೀ. ದೂರದ ಆಸ್ಪತ್ರೆಗೆ ಹೊತ್ತು ಸಾಗಿಸಲಾಗಿದೆ.
ವಿವಿರ: ಕಲಹಂಡಿ ಜಿಲ್ಲೆ ಯ ಗ್ರಾಮದ ಮಹಿಳೆ ಹೆರಿಗೆ ನೋವಿನಿಂದ ನರಳುತ್ತಿದ್ದರು. ಆಗ ಮರದ ತುಂಡಿಗೆ ಬೆಡ್‍ಷೀಟ್ ಕಟ್ಟಿ ಅದರಲ್ಲಿ ಕೂರಿಸಿಕೊಂಡು ನಾಲ್ವರು ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳನ್ನು ದಾಟಿ ಬರೋಬ್ಬರಿ ಹದಿನಾರು ಕಿ.ಮೀ. ಹೊತ್ತು ಸಾಗಿಸಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Pregnent-Women--1

ಒರಿಸ್ಸಾದ ಆರೋಗ್ಯ ಇಲಾಖೆಯಲ್ಲಿ ಇಂತಹ ಹಲವಾರು ಅಸಹ್ಯಕರ ಘಟನೆಗಳು ನಡೆಯುತ್ತಲೇ ಇದ್ದರೂ ಅಲ್ಲಿನ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಜನರ ನೋವು, ಕಷ್ಟಿಗಳಿಗೆ ಸ್ಪಂದಿಸಲು ಪುರುಸೋತ್ತಿಲ್ಲ. ಗರ್ಭಿಣಿಯನ್ನು ಹೊತ್ತು ಅಷ್ಟು ದಾರಿ ನಡೆಯುವಾಗ ಆ ಮಹಿಳೆಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ಇದೇ ಕಲಹಂಡಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ದಾನಾಸಿಂಗ್ ಎಂಬ ವ್ಯಕ್ತಿ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಹತ್ತು ಕಿ.ಮೀ. ನಡೆದಿದ್ದ. ಇನ್ನೊಂದು ಪ್ರಕರಣದಲ್ಲಿ ಶವ ಸಾಗಿಸಲು ವಾಹನ ದೊರೆಯದೆ 76 ವರ್ಷದ ಮಹಿಳೆಯೊಬ್ಬಳ ಶವದ ಕೈ-ಕಾಲು, ಮೂಳೆಗಳನ್ನೆಲ್ಲಾ ಮುರಿದು ಚೀಲದಲ್ಲಿ ಕಟ್ಟಿ ಸಾಗಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin