ಶಾಸಕ ಪುಟ್ಟಣ್ಣಯ್ಯ ವಿರುದ್ಧ ಪುಟ್ಟರಾಜು ಟೀಕಾಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಪಾಂಡವಪುರ, ಜು.24- ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಓಡಾಟ ನೋಡಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಹೊಟ್ಟೆನೋವು ಬಂದಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದರು. ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ವಂಶಿಕರ ಕುಟುಂಬ; ಶ್ರೀಮಂತ ಮನೆತನ. ಇಂತಹ ಶ್ರೀಮಂತ ಹಿನ್ನೆಲೆಯುಳ್ಳ ನನ್ನ ಮೇಲೆ ಗಣಿಗಾರಿಕೆಯಿಂದ ಹಣ ಮಾಡಿದ್ದೇನೆ ಎಂದು ಪುಟ್ಟಣ್ಣಯ್ಯ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿದರು.

ಬೇಬಿ ಗ್ರಾಮದ ಅಮೃತಮಹಲ್ ಕಾವಲ್‍ನಲ್ಲಿ ನಡೆಯುತ್ತಿರುವುದು ಅಧಿಕೃತ ಕಲ್ಲು ಗಣಿಗಾರಿಕೆ. ಅಲ್ಲದೆ ಚಿನಕುರಳಿ ಗ್ರಾಮ ಪಂಚಾಯಿತಿ ಸರ್ವೆ ನಂ. 80, ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಸರ್ವೆ ನಂ. 127ರಲ್ಲಿ ರಾಜಧನ ಪಾವತಿಸಿ ಕಲ್ಲು ಗಣಿಗಾರಿಕೆ ನಡೆಸಲು 1980ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಅದರಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ರಾಜಧನ ಪಾವತಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ ಶಾಸಕ ಪುಟ್ಟಣ್ಣಯ್ಯ ಸರ್ಕಾರಕ್ಕೆ ಮತ್ತು ಜನರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಹಾಗೂ ವೀಕ್ಷಕರಾದ ಗಂಗಾಧರಮೂರ್ತಿ, ಪ್ರದೀಪ್ ಮಾತನಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಹಿರೇಮರಳಿ ಧರ್ಮರಾಜು , ತಾ.ಪಂ ಅಧ್ಯಕ್ಷೆ ರಾಧಮ್ಮ, ಪುರಸಭೆ ಅಧ್ಯಕ್ಷೆ ಎಸ್.ಕೆ.ವಿನುತಾ, ಉಪಾಧ್ಯಕ್ಷೆ ಎಚ್.ವಿ.ರಾಧಾಮಣಿ, ಜಿ.ಪಂ ಸದಸ್ಯರಾದ ಸಾಮಿಲ್ ತಿಮ್ಮೇಗೌಡ, ಶಾಂತಲಾ, ಅನುಸೂಯ, ಎಪಿಎಂಸಿ ಅಧ್ಯಕ್ಷ ಸ್ವಾಮಿಗೌಡ, ಮಂಡ್ಯ ತಾ.ಪಂ ಅಧ್ಯಕ್ಷ ಬೀರಪ್ಪ, ಯುವ ಜನತಾದಳ ಅಧ್ಯಕ್ಷ ಶಶೀಧರ್, ಮುಖಂಡರಾದ ದುದ್ದ ಸಿದ್ದರಾಮಯ್ಯ, ಭೂವಣ್ಣ, ಸಿ.ಕೆ.ದೇವೇಗೌಡ, ಬಿ.ವೈ.ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin