ಸಿರಿಯಾದಲ್ಲಿ ಐಸಿಸ್ ಉಗ್ರ ಸಂಘಟನೆ ಸೇರಿದ ಕೇರಳದ 6 ಯುವಕರು

ISIS--01

ನವದೆಹಲಿ, ಜು.24- ಸಿರಿಯಾದಲ್ಲಿ ಐಸಿಸ್ ಉಗ್ರರ ಪರವಾಗಿ ಕೇರಳದ 6 ಮಂದಿ ಯುವಕರು ಶಸ್ತ್ರ ಸಜ್ಜಿತರಾಗಿ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೇರಳದ ಕಣ್ಣೂರು ಸುತ್ತಮುತ್ತಲಿನ 6 ಮಂದಿ ಯುವಕರು ಕಳೆದ ಫೆಬ್ರವರಿಯಿಂದ ಸಿರಿಯಾದಲ್ಲಿ ಐಸೀಸ್ ಉಗ್ರರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತ ಪಡಿಸಿವೆ. ಕಳೆದ ಫೆ.1ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇರಳ ಮೂಲದ ಶಹಸಜನ್ ವೆಳ್ಳುವ ಖಾಂಡೆ ಎಂಬಾತನನ್ನು ಅನುಮಾನಸ್ಪದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೇರಳದ ಯುವಕರು ಸಿರಿಯಾದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದನ್ನು ಬಹಿರಂಗ ಪಡಿಸಿದ್ದಾನೆ.

ಕೇರಳದಿಂದ ಹೊರಟ ಈ ಯುವಕರು ದೆಹಲಿ ಮೂಲಕ ದುಬೈ ತಲುಪಿ ಅಲ್ಲಿಂದ ಟಿರ್ಕಿ ಗಡಿಯ ಮೂಲಕ ಸಿರಿಯಾವನ್ನು ಪ್ರವೇಶಿಸಿದ್ದಾರೆ. ಸದ್ಯಕ್ಕೆ ಅವರೆಲ್ಲರೂ ಐಸೀಸ್ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿದ್ದಾರೆ ಎಂದು ತನಿಖಾ ವೇಳೆ ಹೇಳಿದ್ದಾನೆ.  ಕೆಲಸ ನಿಮಿತ್ತ ದುಬೈಗೆ ತೆರಳಿ ಅಲ್ಲಿಂದ ಹಣ ಸಂಪಾದಿಸುವ ಮೂಲಕ ಟರ್ಕಿ ತಲುಪಿ ಇರಾನ್ ಗಡಿಯಿಂದ ಸಿರಿಯಾವನ್ನು ತಲುಪುತ್ತಿದ್ದಾರೆ. ಸದ್ಯಕ್ಕೆ 6 ಯುವಕರು ಮಾತ್ರ ಭಾಗವಹಿಸಿದ್ದು, ತನಗೆ ಹುಳಿದವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ.

ಯುವಕರ ಹೆಸರುಗಳು, ಅವರ ಹುಟ್ಟೂರು, ಹಿನ್ನೆಲೆ ಬಗ್ಗೆ ಬಹಿರಂಗ ಪಡಿಸಲು ಹಿಂದೇಟು ಹಾಕಿರುವ ಈ ಶಂಕಿತ ಉಗ್ರ, ಕಣ್ಣೂರು ಸುತ್ತಮುತ್ತಲಿನ ಯುವಕರು ಐಸೀಸ್ ಉಗ್ರರ ಚಿಂತನೆಯತ್ತ ಒಲವು ಹೊಂದಿದ್ದಾರೆ.  ಪಾಸ್‍ ಪೋರ್ಟ್ ಸಿಗದ ಕಾರಣ ಕೆಲವರು ವಿದೇಶಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಇರುವ ಕಾರಣ ನಮ್ಮ ಯೋಜನೆಗಳು ತಲೆಕೆಳಕಾಗಿವೆ ಎಂದು ಮಾಹಿತಿಗಳನ್ನು ಹೊರ ಹಾಕಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin