ಆ.15ರ ವೇಳೆಗೆ 125 ಇಂದಿರಾ ಕ್ಯಾಂಟಿನ್ ಪ್ರಾರಂಭ ಅನುಮಾನ

Namma-Canteen

ಬೆಂಗಳೂರು, ಜು.25- ನಗರದಲ್ಲಿ ಆಗಸ್ಟ್ 15ರ ವೇಳೆಗೆ 125 ಇಂದಿರಾ ಕ್ಯಾಂಟಿನ್‍ಗಳು ಪ್ರಾರಂಭವಾಗುವುದು ಅನುಮಾನವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಸ್ಟ್ 15ರ ವೇಳೆಗೆ ನಗರದಲ್ಲಿ 125 ಇಂದಿರಾ ಕ್ಯಾಂಟಿನ್‍ಗಳು ಪ್ರಾರಂಭವಾಗಲಿವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಪರಿಸ್ಥಿತಿ ಅವಲೋಕಿಸಿ ದರೆ ಅವರು ಹೇಳಿದ ಅರ್ಧದಷ್ಟೂ ಕ್ಯಾಂಟಿನ್‍ಗಳು ಪ್ರಾರಂಭವಾಗುವ ಸಾಧ್ಯತೆ ಕಡಿಮೆ. ಈವರೆಗೆ ಕೇವಲ 28 ಕ್ಯಾಂಟಿನ್‍ಗಳು ಮಾತ್ರ ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಆಗಸ್ಟ್ 15ಕ್ಕೆ ಕೇವಲ 20 ದಿನಗಳು ಮಾತ್ರ ಉಳಿದಿವೆ. ಅಂದಾಜು ಒಂದು ಕ್ಯಾಂಟಿನ್ ಸ್ಥಾಪಿಸಲು ಒಂದು ವಾರವಾದರೂ ಬೇಕಾಗುತ್ತದೆ. ಅಂಥದ್ದರಲ್ಲಿ 15ರೊಳಗೆ 125 ಕ್ಯಾಂಟಿನ್‍ಗಳು ಪ್ರಾರಂಭವಾಗಲು ಸಾಧ್ಯವೇ ಎಂಬ ಜಿಜ್ಞಾಸೆ ಕಾಡುತ್ತಿದೆ.

ಸರ್.ಸಿ.ವಿ.ರಾಮನ್‍ನಗರ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞ ನಗರ, ಶಾಂತಿನಗರ, ಶಿವಾಜಿನಗರ ಮತ್ತಿತರ ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್‍ಗಳ ಸ್ಥಾಪನಾ ಕಾರ್ಯ ನಡೆದಿದೆ.  ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‍ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್‍ಭಿಮಾ ನಗರ, ಕೋನೇನ ಅಗ್ರಹಾರ ಸೇರಿದಂತೆ 28 ವಾರ್ಡ್‍ಗಳಲ್ಲಿ ಮಾತ್ರ ಇಂದಿರಾ ಕ್ಯಾಂಟಿನ್ ಸ್ಥಾಪಿಸಲಾಗುತ್ತಿದೆ. 21 ಸ್ಥಳಗಳಲ್ಲಿ ಈ ಕ್ಯಾಂಟಿನ್‍ಗಳಿಗೆ ಆಹಾರ ಸರಬರಾಜು ಮಾಡುವ ಸಿದ್ಧತೆ ನಡೆದಿದೆ. ಆ.15ರ ವೇಳೆಗೆ ಇನ್ನು 50 ಕ್ಯಾಂಟಿನ್‍ಗಳು ಸಾಧ್ಯವಾಗ ಬಹುದೇನೊ. ಉಳಿದ ಕ್ಯಾಂಟಿನ್ ಗಳ ಪ್ರಾರಂಭಕ್ಕೆ ಸುಮಾರು 2 ತಿಂಗಳಾದರೂ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಸ್ವಾತಂತ್ರ್ಯ ದಿನೋತ್ಸವದ ವೇಳೆಗೆ 125 ಕ್ಯಾಂಟಿನ್ ಪ್ರಾರಂಭವಾಗುವುದು ಅನುಮಾನ ಎಂದೇ ಹೇಳಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin