ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-07-2017)

ನಿತ್ಯ ನೀತಿ : ನೋವಿನಿಂದ ಕೂಡಿದ್ದರೂ ಇತರರಿಗೆ ನೋವನ್ನುಂಟುಮಾಡುವ ಮಾತನ್ನಾಡಬಾರದು. ಇತರರಿಗೆ ದ್ರೋಹವಾಗುವ ಕೆಲಸ ಮತ್ತು ಬುದ್ಧಿ ಇರಬಾರದು. ಇತರರಿಗೆ ಬೇಸರವಾಗುವ ಲೋಕರೂಢಿಯಲ್ಲಿಲ್ಲದ ಅಥವಾ ಉಚಿತವಲ್ಲದ ಮಾತನ್ನು ಆಡಬಾರದು.

Rashi

ಪಂಚಾಂಗ : ಮಂಗಳವಾರ, 25.07.2017

ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಬೆ.07.46 / ಚಂದ್ರ ಅಸ್ತ ರಾ.08.35
ಹೇವಿಳಂಬಿ ಸಂವತ್ಸರ /ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ದ್ವಿತೀಯಾ (ಬೆ.09.58)
ನಕ್ಷತ್ರ: ಮಖ (ರಾ.04.52) / ಯೋಗ: ವ್ಯತೀಪಾತ (ರಾ.07.33)
ಕರಣ: ಕೌಲವ-ತೈತಿಲ (ಬೆ.09.58-ರಾ.08.59)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 10


ರಾಶಿ ಭವಿಷ್ಯ :

ಮೇಷ : ನ್ಯಾಯಾಂಗ ವ್ಯವಹಾರಗಳಲ್ಲಿ ಜಯ ಸಿಗಲಿದೆ
ವೃಷಭ : ಗುರುಗಳ ಆರಾಧನೆ ಮಾಡುವುದು ಉತ್ತಮ
ಮಿಥುನ: ಉನ್ನತ ಮಟ್ಟದ ಸಾಧನೆ ಮಾಡುವ ವರಿಗೆ ಪ್ರೋತ್ಸಾಹ ಸಿಗಲಿದೆ, ಉತ್ತಮ ಆರೋಗ್ಯ
ಕಟಕ : ಸ್ವಾರ್ಥ ಸಾಧಕರು ನಿಮ್ಮ ಮನಸ್ಸು ಕೆಡಿಸುವ ಸಂಭವವಿದೆ, ತಟಸ್ಥವಾಗಿ ಉಳಿಯುವುದು ಉತ್ತಮ
ಸಿಂಹ: ಹಠ, ಛಲದ ಸ್ವಭಾವ ದಿಂದ ದೊಡ್ಡ ಕನಸನ್ನು ನನಸಾಗಿಸಿಕೊಳ್ಳುವಿರಿ
ಕನ್ಯಾ: ಮನೆಯಲ್ಲಿ ಚಿಕ್ಕವರ ಆಸೆಗಳು ಹೆಚ್ಚುವುದರಿಂದ ಖರ್ಚು ಅಧಿಕಗೊಳ್ಳಲಿವೆ

ತುಲಾ: ನವ ವಿವಾಹಿತರಿಗೆ ಹೆಚ್ಚು ತೃಪ್ತಿ ಸಿಗಲಿದೆ
ವೃಶ್ಚಿಕ : ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶವಿದೆ
ಧನುಸ್ಸು: ದೂರ ಪ್ರಯಾಣ ಮಾಡದಿರುವುದು ಸೂಕ್ತ
ಮಕರ: ತೊಡಕಾಗಿದ್ದ ಕಾನೂನು-ಕಟ್ಟಲೆಗಳಿಗೆ ತಜ್ಞರ ಸಹಾಯದಿಂದ ಪರಿಹಾರ ಕಾಣುವಿರಿ
ಕುಂಭ: ಗೃಹಾಲಂಕಾರ ವಸ್ತುಗಳ ಖರೀದಿಯಿಂದ ಮನೆಯವರಿಂದ ಪ್ರಶಂಸೆ ಸಿಗಲಿದೆ
ಮೀನ: ಶತ್ರುಗಳೂ ಮಿತ್ರರಾಗುವ ಸಂದರ್ಭ ಒದಗಿ ಬರಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin