ಕರ್ನಾಟಕ-ಕೇರಳ ಸಾರಿಗೆ ನಡುವೆ ಅಂತರರಾಜ್ಯ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

KSRTC--01

ಬೆಂಗಳೂರು, ಜು.25-ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವೆ ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ ಐದು ಪೂರಕ ಅಂತರ್‍ರಾಜ್ಯ ಸಾರಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.   ಈ ಒಪ್ಪಂದದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೇರಳ ರಾಜ್ಯದಲ್ಲಿ 5 ಮಾರ್ಗಗಳಲ್ಲಿ ನೂತನ ಸಾರಿಗೆಗಳನ್ನು 4,314 ಸೇವಾ ಕಿ.ಮೀ.ಗಳಷು ಕ್ರಮಿಸಬಹುದಾಗಿದೆ.  ಬೆಂಗಳೂರು-ಪಟ್ಟಣಂ ಬಿಟ್ಟು ಕುಂದಾಪುರ-ತಿರುವನಂತಪುರಂ, ಕುಂದಾಪುರಂ-ಕೊಟ್ಟಾಯಂ, ಮಣಿಪಾಲ-ಎರ್ನಾಕುಲಂ ಮತ್ತು ಕೊಲ್ಲೂರು-ಗುರುವಾಯೂರು ಮಾರ್ಗಗಳಲ್ಲಿ ಸಾರಿಗೆಗಳನ್ನು ಅಳವಡಿಸಬಹುದಾಗಿದೆ.

ಅದೇ ರೀತಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕರ್ನಾಟಕ ರಾಜ್ಯದಲ್ಲಿ 7 ಮಾರ್ಗಗಳಲ್ಲಿ ನೂತನ ಸಾರಿಗೆಗಳನ್ನು ಮಾಡಿ 4,420 ಸೇವಾ ಕಿಲೋಮೀಟರ್‍ಗಳನ್ನು ಕಾರ್ಯಾಚರಿಸಲು ಸಾಧ್ಯವಾಗುವುದು. ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಮತ್ತು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಪೂರಕ ಅಂತರ್‍ರಾಜ್ಯ ಸಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.  ಕಳೆದ ವಾರ ಕೇರಳದ ಅಲೆಪ್ಟಿಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಸಾರಿಗೆ ಸಚಿವರು, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸಾರಿಗೆ ಸಚಿವರು ಭಾಗವಹಿಸಿದ್ದ ಸಮಾರಂಭದಲ್ಲಿ ಎರಡೂ ರಾಜ್ಯಗಳ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಡಿ.ಬಸವರಾಜ್ ಮತ್ತು ಕೆ.ಆರ್.ಜ್ಯೋತಿರಾವ್, ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆಗಳು ಅಳವಡಿಸಬೇಕಾದ ಮಾರ್ಗಗಳು ಮತ್ತು ವಿಶೇಷ ಪರವಾನಗಿ ಆಧಾರದ ಮೇಲೆ ಕಾರ್ಯಾಚರಿಸುವ ಬಸ್‍ಗಳ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡುವ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಶಬರಿಮಲೈ, ಬೇಸಿಗೆ ಅವಧಿ, ವಿವಿಧ ಹಬ್ಬಗಳ ಸಮಯದಲ್ಲಿ ವಿಶೇಷ ಪರವಾನಗಿ ಆಧಾರದ ಮೇಲೆ, ಸಾರ್ವಜನಿಕ ಪ್ರಯಾಣಿಕರ ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಕೇರಳ ಸಾರಿಗೆ ನಿಗಮ ಪ್ರತಿವರ್ಷ ಒದಗಿಸುವ 250 ಬಸ್‍ಗಳಿಗೆ ಮೋಟಾರ್ ವಾಹನ ತೆರಿಗೆ, ಪ್ರಯಾಣಿಕರ ತೆರಿಗೆ, ಪ್ರವೇಶ ಶುಲ್ಕ ಮುಂತಾದವುಗಳಿಗೆ ವಿನಾಯಿತಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin