ಬಡ್ತಿ ಸಿಗದಿದ್ದಕ್ಕೆ ಬೇಸತ್ತ ಕಾಫಿ ಡೇ ಸಿಬ್ಬಂದಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Cofee-Day--01

ಬೆಂಗಳೂರು, ಜು.25- ಕಾಫಿಡೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬ ಉದ್ಯೋಗದಲ್ಲಿ ಬಡ್ತಿ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ನಾರಾಯಣಪುರ ವಾಸಿ ಪ್ರಮೋದ್ ಆತ್ಮಹತ್ಯೆಗೆ ಶರನಾಗಿರುವ ಕಾಫಿಡೇ ಉದ್ಯೋಗಿ. ಉದ್ಯೋಗ ಅರಸಿ ಚಿಕ್ಕಮಗಳೂರಿನಿಂದ ಬೆಂಗಳೂರಿನ ಮಹದೇವಪುರ ಸಮೀಪ ನಾರಾಯಣಪುರಕ್ಕೆ ಬಂದಿದ್ದ ಪ್ರಮೋದ್, ಇಲ್ಲಿನ ಫಿನಿಕ್ಸ್ ಮಾಲ್‍ನ ಕಾಫಿಡೇನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Death-Note--01

ಪ್ರಮೋದ್ ಕಳೆದ 11 ವರ್ಷಗಳಿಂದ ಕಾಫಿಡೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗದಲ್ಲಿ ಬಡ್ತಿ ನೀಡುವಂತೆ ಮೇಲಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಇದುವರೆಗೂ ಆತನಿಗೆ ಬಡ್ತಿ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಸಂಬಳದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.

ಸತತ 11 ವರ್ಷಗಳ ಸೇವಾ ಅನುಭವದ ಆಧಾರದ ಮೇಲೆ ಉದ್ಯೋಗದಲ್ಲಿ ಬಡ್ತಿ ನೀಡಿ ಸಂಬಳದಲ್ಲಿ ಏರಿಕೆ ಮಾಡಿ ಎಂದು ಕಾಫಿಡೇ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆ. ಆದರೆ, ಇದುವರೆಗೂ ಬಡ್ತಿ ನೀಡಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ಕಾಫಿಡೇ ಕಾರಣ. ತನ್ನ ಪತ್ನಿ ಹಾಗೂ ಪುತ್ರಿ ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡುವಂತೆ ತಮ್ಮ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin