ಬನ್ನೇರುಘಟ್ಟ ಪಾರ್ಕ್‍ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜೀಬ್ರಾ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Zeebra

ಬೆಂಗಳೂರು, ಜು.25- ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಬನ್ನೇರುಘಟ್ಟ ಬಯೋಲಜಿಕಲ್ ಪಾರ್ಕ್‍ನಲ್ಲಿ ಜೀಬ್ರಾವೊಂದು ಸಾವನ್ನಪ್ಪಿದೆ. ಇಸ್ರೇಲ್‍ನಿಂದ 2015ರ ನವೆಂಬರ್‍ನಲ್ಲಿ ತರಿಸಿಕೊಳ್ಳಲಾಗಿದ್ದ ಹೆಣ್ಣು ಜೀಬ್ರಾ ಮೃತಪಟ್ಟಿದೆ. ಈ ಜೀಬ್ರಾವನ್ನು ಆರು ತಿಂಗಳ ಕಾಲ ಪ್ರತ್ಯೇಕವಾಗಿರಿಸಿ ನಂತರ ಪ್ರವಾಸಿಗರಿಗಾಗಿ ಪ್ರದರ್ಶನಕ್ಕೆ ಬಿಡಲಾಗಿತ್ತು. ಇತ್ತೀಚೆಗೆ ಡಿಎಫ್‍ಒ ಕುಶಾಲಪ್ಪನವರು ಮರ ನೆಡುವ ಸಲುವಾಗಿ ಗುಂಡಿಯನ್ನು ತೆಗೆಸಿದ್ದರು. ಆದರೆ, ಯಾವುದೇ ಗಿಡ-ಮರ ನೆಟ್ಟಿರಲಿಲ್ಲ. ಜತೆಗೆ ಗುಂಡಿಯನ್ನು ಮುಚ್ಚಿರಲೂ ಇಲ್ಲ.

ಕಳೆದ ರಾತ್ರಿ ಅಡ್ಡಾಡುತ್ತ ಬಂದ ಈ ಹೆಣ್ಣು ಜೀಬ್ರಾ ಹಿಮ್ಮುಖವಾಗಿ ಆಯತಪ್ಪಿ ಈ ಗುಂಡಿಗೆ ಬಿದ್ದು ಮೃತಪಟ್ಟಿದೆ. ಈ ಜೀಬ್ರಾ ಗರ್ಭಧರಿಸಿತ್ತೆಂದು ಪಾರ್ಕ್‍ನ ಮೂಲಗಳಿಂದ ಗೊತ್ತಾಗಿದೆ. ಇಸ್ರೇಲ್‍ನಿಂದ 2 ಗಂಡು, 2 ಹೆಣ್ಣು ಜೀಬ್ರಾಗಳನ್ನು ತರಿಸಲಾಗಿತ್ತು. ಈಗ ಅದರಲ್ಲಿ ಒಂದು ಹೆಣ್ಣು ಮೃತಪಟ್ಟಿರುವುದು ಪ್ರಾಣಿಪ್ರಿಯರಲ್ಲಿ ಅತ್ಯಂತ ಬೇಸರ ಮೂಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin