ಮಂಗಳೂರಿನಲ್ಲಿ ರೌಡಿಶೀಟರ್ ಮಗನ ಬರ್ಬರ ಕೊಲೆ

Mangaluru--01

ಮಂಗಳೂರು, ಜು.25-ಈ ಹಿಂದೆ ಕೊಲೆಗೀಡಾಗಿದ್ದ ರೌಡಿಶೀಟರ್ ಒಬ್ಬನ ಪುತ್ರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳೂರಿನ ಹೊರವಲಯದ ವಾಮಂಜೂರಿನಲ್ಲಿ ನಡೆದಿದೆ. ಪವನ್‍ರಾಜ್‍ಶೆಟ್ಟಿ (23) ಕೊಲೆಯಾದ ಯುವಕ.
2009ರಲ್ಲಿ ಪವನ್‍ರಾಜ್‍ಶೆಟ್ಟಿ ತಂದೆ ರೌಡಿಶೀಟರ್ ರೋಹಿನನ್ನು ಕೊಲೆ ಮಾಡಿದ್ದ.

ಇದೀಗ ರೋಹಿ ಮಗ ಪವನ್‍ರಾಜ್‍ಶೆಟ್ಟಿಯನ್ನು ಇಂದು ಬೆಳಗ್ಗೆ ವಾಮಂಜೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೇಲ್ನೋಟಕ್ಕೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಹೇಳಲಾಗಿದೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin