ವಿಭಿನ್ನತೆಯಲ್ಲೇ ಏಕತೆ ನಮ್ಮ ದೇಶದ ವಿಶೇಷತೆ : ರಾಷ್ಟ್ರಪತಿ ಕೊವಿಂದ್ ಬಣ್ಣನೆ

Kovind--014

ನವದೆಹಲಿ, ಜು.25-ವಿಭಿನ್ನತೆ ನಡುವೆಯೂ ಏಕತೆ ನಮ್ಮ ದೇಶದ ವಿಶೇಷತೆ ಎಂದು ಬಣ್ಣಿಸಿರುವ ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಷ್ಟ್ರದ ಜನರೇ ದೇಶದ ಸಫಲತೆಯ ಹರಿಕಾರರು ಎಂದು ಹೇಳಿದ್ದಾರೆ. ಭಾರತದ 14ನೆ ರಾಷ್ಟ್ರಪತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇದಲ್ಲಿ ಸರ್ವಧರ್ಮ ಸಮಾನತೆ ಇದೆ. ಒಬ್ಬರನ್ನೊಬ್ಬರು ಗೌರವಿಸುವುದು ನಮ್ಮ ಪ್ರಜಾತಂತ್ರದ ವಿಶೇಷತೆಯಾಗಿದೆ ಎಂದರು.

ಇಡೀ ಜಗತ್ತು ಭಾರತೀಯ ಸಂಸ್ಕøತಿ ಮತ್ತು ಪರಂಪರೆಗಳತ್ತ ನೋಡುತ್ತಿದೆ. ಹೀಗಾಗಿ ನಮ್ಮೆಲ್ಲರ ಮೇಲೆ ಹಿಂದಿಗಿಂತಲೂ ಹೆಚ್ಚು ಜವಾಬ್ದಾರಿ ಇದೆ ಎಂದು ನೂತನ ರಾಷ್ಟ್ರಪತಿ ಹೇಳಿದರು.  ಸೈನಿಕರು ಮತ್ತು ಕೃಷಿಕರು ಸೇರಿದಂತೆ ಪ್ರತಿಯೊಬ್ಬರೂ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ವೈಜ್ಞಾನಿಕ ಮತ್ತು ಇತರ ಕ್ಷೇತ್ರಗಳಲ್ಲಿ ಇರುವವರಿಂದಲೂ ದೇಶ ಕಟ್ಟುವ ಕೆಲಸ ಸಾಗುತ್ತಿದೆ ಎಂದು ರಾಮನಾಥ ಕೋವಿಂದ್ ತಿಳಿಸಿದರು.

ಡಿಜಿಟಲ್ ಇಂಡಿಯಾ ಯೋಜನೆಯಿಂದ ಭಾರತದ ಪ್ರಗತಿಗೆ ನೆರವಾಗಲಿದೆ, ನವೋದ್ಯಮಗಳ ಮೂಲಕ ದೇಶ ನಿರ್ಮಾಣದ ಕಾರ್ಯಗಳು ಮುಂದುವರಿದಿದೆ ಎಂದು ಅವರು ಬಣ್ಣಿಸಿದರು.  ಮಣ್ಣಿನ ಮನೆಯಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿ ನಾನು. ಈ ಹುದ್ದೆಯನ್ನು ಅತ್ಯಂತ ಶ್ರದ್ಧೆ ಮತ್ತು ವಿನಮ್ರತೆಯಿಂದ ನಿಭಾಯಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.   ತಮ್ಮನ್ನು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin