ಶಾಸಕ ಜಮೀರ್ ಹುಟ್ಟುಹಬ್ಬಕ್ಕೆ ಆಗಮಿಸಲಿದ್ದಾರಂತೆ ಬಾಲಿವುಡ್ ಸ್ಟಾರ್ ಗಳು

Jameer-ahamad

ಬೆಂಗಳೂರು, ಜು.25-ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್‍ರವರ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ಸ್‍ಗಳು ಆಗಮಿಸಲಿದ್ದಾರೆ. ಆಗಸ್ಟ್ 1ರಂದು ಜಮೀರ್ ಅಹಮ್ಮದ್ ಅವರ ಹುಟ್ಟುಹಬ್ಬ ಸಮಾರಂಭಕ್ಕೆ ಬಾಲಿವುಡ್ ನಟರಾದ ಶಾರುಖ್‍ಖಾನ್, ಬ್ಯಾಡ್‍ಬಾಯ್ ಸಲ್ಮಾನ್‍ಖಾನ್‍ನನ್ನು ಆಹ್ವಾನಿಸಲಾಗಿದೆ. ಕಳೆದ ವರ್ಷ ಬಾಲಿವುಡ್ ಸೆಲೆಬ್ರಿಟಿಗಳಾದ ಸಂಜಯ್‍ದತ್, ಶಕ್ತಿಕಪೂರ್ ಮತ್ತಿತರರು ಬಂದು ಜಮೀರ್ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಬಾಲಿವುಡ್ ಸ್ಟಾರ್‍ಗಳ ಜೊತೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಮುಂದಿನ ಚುನಾವಣಾ ಪ್ರಚಾರಕ್ಕೂ ಕರೆತರುವ ಪ್ಲ್ಯಾನ್ ರೂಪಿಸಿದ್ದಾರೆ.

ಜೊತೆಗೆ ತಮ್ಮ ಪುತ್ರ ಜಹೀದ್‍ಖಾನ್ ಸಿನಿಮಾ ಭವಿಷ್ಯವನ್ನು ಗಟ್ಟಿಗೊಳಿಸಲು ಮತ್ತು ಈತನನ್ನು ಬಾಲಿವುಡ್‍ಗೆ ಪರಿಚಯಿಸಲು ಕಸರತ್ತು ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin