ಕಾರ್ಗಿಲ್ ವಿಜಯ್ ದಿವಸ್‍ : ಯೋಧರ ತ್ಯಾಗ-ಬಲಿದಾನವನ್ನು ಸ್ಮರಿಸಿದ ಪ್ರಧಾನಿ ಮೋದಿ

Karhil--01

ನವದೆಹಲಿ, ಜು.26- ಭಾರತೀಯ ವಿರ ಯೋಧರು ತಮ್ಮ ತ್ಯಾಗ-ಬಲಿದಾನಗಳಿಂದ ಈ ದೇಶವನ್ನು ರಕ್ಷಿಸುತ್ತಿದ್ದು ಅವರನ್ನು ಸ್ಮರಿಸುವುದು, ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. 1999ರಲ್ಲಿ ಪಾಕಿಸ್ಥಾನದ ದುರಾಕ್ರಮಣದ ವಿರುದ್ಧ ಹೋರಾಡಿ ಜಯವನ್ನು ತಂದಿತ್ತು ರಣರಂಗದಲ್ಲಿ ತಮ್ಮ ಪ್ರಾಣಗಳನ್ನು ಅರ್ಪಿಸಿದ ಜು. 26ರ ಕಾರ್ಗಿಲ್ ವಿಜಯ ದಿನ(ವಿಜಯ್ ದಿವಸ್) ಆಚರಣೆಯ ಹಿನ್ನೆಲೆಯಲ್ಲಿ ಮೋದಿ ಮಾತನಾಡಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭ ನಮ್ಮ ಭಾರತಾಂಬೆಯ ಮಕ್ಕಳು ಈ ದೇಶದ ಘನತೆ-ಗೌರವಗಳನ್ನು ಎತ್ತಿ ಹಿಡಿಯಲು, ನಮ್ಮ ನಾಗರಿಕರನ್ನು ಸಂರಕ್ಷಿಸಲು ವೀರಾವೇಶದಿಂದ ಯುದ್ಧ ಮಾಡಿ ತಮ್ಮ ಪ್ರಾಣಗಳನ್ನು ಬಲಿ ಕೊಟ್ಟು ನಮಗೆ ಸಮರದಲ್ಲಿ ಗೆಲುವು ತಂದು ಕೊಟ್ಟದ್ದಲ್ಲದೆ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿದರು ಎಂದು ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ. ಭಾರತದ ಸುರಕ್ಷತೆಗಾಗಿ, ಭಾರತೀಯರ ರಕ್ಷಣೆಗಾಗಿ ನಮ್ಮ ವೀರ ಸೈನಿಕರು ರಣಾಂಗಣದಲ್ಲಿ ಹೋರಾಡಿದರು ಎಂಬುದರೊಂದಿಗೆ, ಭಾರತದ ಸೇನಾ ಸಾಮಥ್ರ್ಯವನ್ನು ಹಾಗೂ ನಮ್ಮ ಸಶಸ್ತ್ರ ಪಡೆಗಳ ಮಹಾನ್ ತ್ಯಾಗ-ಬಲಿದಾನಗಳನ್ನು ಈ ಕಾರ್ಗಿಲ್ ಯುದ್ಧದ ವಿಜಯದ ವಾರ್ಷಿಕೋತ್ಸವ ನಮಗೆ ಮನದಟ್ಟು ಮಾಡಿ ಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಣಿ ಟ್ವೀಟ್‍ಗಳಲ್ಲಿ ಬಿಚ್ಚಿಟ್ಟಿದ್ದಾರೆ.

ನಮ್ಮ ರಾಷ್ಟ್ರದ ರಕ್ಷಣೆಗಾಗಿ, ದೇಶದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಸಮರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಮ್ಮ ವೀರ ಸೇನಾನಿಗಳನ್ನು ನಾನು ಮನಸಾರ, ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ವೀರಭೂಮಿಗೆ ತೆರಳಿ ಹುತಾತ್ಮ ಯೋಧರ ಸ್ಮಾರಕಕ್ಕೆ ಹೂಗುಚ್ಛಗಳನ್ನರ್ಪಿಸಿ ಶದ್ಧಾಂಜಲಿ  ಸಲ್ಲಿಸಿದರು.

1999ರಲ್ಲಿ ಪಾಕಿಸ್ಥಾನಿ ಪಡೆಗಳು ಜಮ್ಮು-ಕಾಶ್ಮೀರದ ಅತ್ಯಂತ ಎತ್ತರದ ಲಡಾಖ್ ಪ್ರದೇಶದಲ್ಲಿ ಭಾರತದ ಮುಂಚೂಣಿ ನೆಲೆಗಳನ್ನು ವಶಪಡಿಸಿಕೊಳ್ಳುವ ದುಃಸ್ಸಾಹಸಕ್ಕೆ ಕೈ ಹಾಕಿದ ಸಂದರ್ಭ ಭಾರತ -ಪಾಕಿಸ್ಥಾನಗಳ ನಡುವೆ ಆ ಘರ್ಷಣೆ ಪ್ರಾರಂಭವಾಗಿತ್ತು. ಆಕ್ರಮಿತ ಪಾಕಿಗರನ್ನು ಒದ್ದೋಡಿಸಿ ನಮ್ಮ ನೆಲವನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಭಾರತೀಯ ಯೋಧರಿಗೆ ಸುಮಾರು ಮೂರು ತಿಂಗಳುಗಳೇ ಬೇಕಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin