ಕಾರ್ಗಿಲ್ ವಿಜಯ ದಿನ ಆಚರಣೆಯಿಂದ ದೇಶಭಕ್ತಿ ಹೆಚ್ಚಾಗುತ್ತೆ : ಸಿಎಂ ಸಿದ್ದರಾಮಯಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಜು.26-ಕಾರ್ಗಿಲ್ ವಿಜಯ ದಿನ ಆಚರಣೆಯಿಂದ ಯುವಕರಲ್ಲಿ ದೇಶಭಕ್ತಿ, ಪ್ರೇಮ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಇಂದಿರಾಗಾಂದಿ ಸಂಗೀತ ಕಾರಂಜಿ ಕಾರ್ಗಿಲ್ ವಿಜಯದಿವಸ ಆಚರಣೆಯಲ್ಲಿ ಭಾಗವಹಿಸಿದ ಅವರು, ಪಾಕಿಸ್ತಾನದವರು ಜಮ್ಮು-ಕಾಶ್ಮೀರದ ಭಾಗಗಳ ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡಿ ವಿಜಯ ಗಳಿಸಿದರು.

Siddaramaiaha--02

ಕಾರ್ಗಿಲ್ ಯುದ್ಧದಲ್ಲಿ ಕರ್ನಾಟಕದ 16 ಮಂದಿ ಸೇರಿದಂತೆ ಭಾರತದ 580 ಮಂದಿ ಸಾವನ್ನಪ್ಪಿ, 1200 ಮಂದಿ ಗಾಯಗೊಂಡಿದ್ದರು. ಸೈನಿಕರ ತ್ಯಾಗ-ಬಲಿದಾನ ಅರಿಯಬೇಕು. ಆ ಮೂಲಕ ಎಲ್ಲರಲ್ಲಿ ದೇಶಪ್ರೇಮ ಬೆಂಕಿ ಹಚ್ಚಿ 1999ರ ಮೇ 5ರಿಂದ ಜು.26 ರವರೆಗೆ ಕಾರ್ಗಿಲ್ ಯುದ್ದ ನಡೆದಿತ್ತು. ನನ್ನ ದೇಶ ವಿಜಯ ಸಾಧಿಸಿದ ದಿನವಾದ ಜು.26ರಂದು ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾರ್ಯಕ್ರಮದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಸಚಿವರಾದ ಎಚ್.ಆಂಜನೇಯ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಗಣೇಶ್ ಕಾರ್ನಿಕ್, ರಾಮಚಂದ್ರಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಕುಂಟಿ ಮತ್ತಿತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin