ರಾಸಾಯನಿಕ ಅಸ್ತ್ರಪ್ರಯೋಗಿಸಿದರೆ ಸುಮ್ಮನೆ ಬಿಡಲ್ಲ : ಸಿರಿಯ ಅಧ್ಯಕ್ಷ ಅಸಾದ್‍ಗೆ ಟ್ರಂಪ್ ವಾರ್ನಿಂಗ್

Trump--01

ವಾಷಿಂಗ್ಟನ್, ಜು. 26- ನಮ್ಮ ಸೈನಿಕರು ಹಾಗೂ ಸಿಬ್ಬಂದಿಯ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸುವ ದುಃಸ್ಸಾಹಸಕ್ಕೆ ಕೈ ಹಾಕಿದರೆ ಸಿರಿಯಾದ ಅಧ್ಯಕ್ಷ ಬಷಾರ್ ಅಲ್-ಅಸಾದ್‍ನನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಹಿಂದಿನ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಸಿರಿಯಾ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ನಾನು ಯಾವುದೇ ಕಾರಣಕ್ಕೂ ಅಸಾದ್‍ನನ್ನು ಒಪ್ಪಿಟ್ಟುಕೊಳ್ಳಲಾರೆ. ನಮ್ಮ ಜನರಿಗೆ ಮತ್ತು ಆ ರಾಷ್ಟ್ರ(ಸಿರಿಯ)ದ ನಾಗರಿಕರಿಗೆ ಅವರು ಏನು ಮಾಡಿದ್ದಾರೆ ಎಂಬುದು ನನಗೆ ಚನ್ನಾಗಿ ಗೊತ್ತಿದೆ. ಸಿರಿಯಾದಲ್ಲಿ ಉಂಟಾಗಿರುವ ಇಂದಿನ ದುಸ್ಥಿತಿಗೆ ಅಸಾದ್ ಧೋರಣೆಯೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ.

ನಿರ್ಬಂಧಕ್ಕೆ ಒಪ್ಪಿಗೆ:

ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಕಡೆಗಣಿಸಿ ಉದ್ಧಟತನದಿಂದ ವರ್ತಿಸುತ್ತಿರುವ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ದೇಶಗಳ ವಿರುದ್ಧ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಅಮೆರಿಕ ಸಂಸತ್ತು ಸಮ್ಮತಿಸಿದ್ದು, ಸಂಬಂಧಿಸಿದ ಮಸೂದೆಯ ಪರ ಅನುಮೋದನೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin