ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆಯರು

ಈ ಸುದ್ದಿಯನ್ನು ಶೇರ್ ಮಾಡಿ

Chappali--01

ವಿಜಯಪುರ, ಜು.26- ಮನೆಯಲ್ಲಿದ್ದ ಮಹಿಳೆಯನ್ನು ದಾರಿಯಲ್ಲಿ ಹೋಗುತ್ತಿದ್ದ ಯುವಕನೊಬ್ಬ ಚುಡಾಯಿಸಿದ್ದರಿಂದ ಮಹಿಳೆಯರೇ ಆತನಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳದಲ್ಲಿ ನಡೆದಿದೆ. ಕುಂಟೂಜಿ ಗ್ರಾಮದ ಯುವಕ ತಾಳಿಕೋಟೆಯಿಂದ ಬೈಕ್‍ನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ದೇವರ ಹುಲಗಬಾಳದ ಮುಖ್ಯರಸ್ತೆ ಪಕ್ಕದಲ್ಲಿರುವ ಮನೆಯೊಂದರ ಮುಂದೆ ಬೈಕ್ ನಿಲ್ಲಿಸಿದ್ದಾನೆ.

ಮನೆಯಲ್ಲಿ ಮಹಿಳೆ ಒಬ್ಬರೇ ಇರಬಹುದೆಂದು ಕೈ ಸನ್ನೆ ಮಾಡಿ ಹೊರಗೆ ಕರೆದಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಮನೆಯಲ್ಲಿದ್ದ ಅತ್ತೆಗೆ ವಿಷಯ ತಿಳಿಸಿದಾಗ ಅತ್ತೆ ಹೊರಗೆ ಬಂದು ಆ ಯುವಕನಿಗೆ ಚಪ್ಪಲಿಯಿಂದ ಥಳಿಸುತ್ತಿದ್ದಾಗ ನೆರೆಹೊರೆಯ ಮಹಿಳೆಯರೂ ಸೇರಿ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದಾಗ ಮದ್ಯದ ಅಮಲಿನಲ್ಲಿದ್ದ ಯುವಕ ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದಾಗ ಪರಿಸ್ಥಿತಿ ತಣ್ಣಗಾಗಿದೆ. ಬೈಕನ್ನು ಕಸಿದುಕೊಂಡ ಗ್ರಾಮಸ್ಥರು ಪೋಷಕರೊಂದಿಗೆ ಬಂದು ಬೈಕ್ ತೆಗೆದುಕೊಂಡು ಹೋಗುವಂತೆ ಯುವಕನನ್ನು ಕಳುಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin