ಡೆಂಘೀಯಿಂದ ಶಾಸಕ ವರ್ತೂರು ಪ್ರಕಾಶ್ ಪತ್ನಿ ನಿಧನ

Varturu-Prakash-Wife

ಕೋಲಾರ, ಜು.26-ಮಹಾಮಾರಿ ಡೆಂಘೀಗೆ ಶಾಸಕ ವರ್ತೂರು ಪ್ರಕಾಶ್ ಅವರ ಪತ್ನಿ ಶಾಮಲಾ (40) ವಿಧಿವಶರಾಗಿದ್ದಾರೆ. ಶಾಮಲಾ ಅವರ ಪುತ್ರನಿಗೆ ಡೆಂಘೀ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ನೋಡಿಕೊಳ್ಳಲು ತಾಯಿ ಜತೆಗಿದ್ದರು. ಪುತ್ರ ಗುಣಮುಖರಾಗಿ ಮನೆಗೆ ಬಂದಿದ್ದು, ಕೆಲ ದಿನಗಳ ನಂತರ ಶಾಮಲಾ ಅವರಿಗೆ ಡೆಂಘೀ ಲಕ್ಷಣ ಕಂಡುಬಂದಿತ್ತು. ಡೆಂಘೀ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಾಮಲಾ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
ಇಂದು ಸಂಜೆ ವರ್ತೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಮಾರಣಾಂತಿಕ ಡೆಂಘೀ ಮತ್ತು ಚಿಕೂನ್‍ಗುನ್ಯಾ ರೋಗದ ಹಾವಳಿ ಹೆಚ್ಚಾಗಿದೆ. ಇದುವರೆಗೂ 2000ಕ್ಕೂ ಹೆಚ್ಚು ಮಂದಿಗೆ ಡೆಂಘೀ ರೋಗ ಲಕ್ಷಣಗಳು ಕಂಡುಬಂದಿದೆ.  ವಿವಿಧ ಆಸ್ಪತ್ರೆಗಳಲ್ಲಿ ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇದುವರೆಗೂ ಯಾವೊಬ್ಬ ರೋಗಿಯೂ ಮೃತಪಟ್ಟಿಲ್ಲ ಎಂಬುದು ಬಿಬಿಎಂಪಿ ಹೇಳಿಕೆಯಾಗಿದೆ. ಆದರೆ, ಇದೀಗ ಡೆಂಘೀ ರೋಗಕ್ಕೆ ಶಾಸಕರ ಪತ್ನಿಯೇ ಮೃತಪಟ್ಟಿರುವುದು ದುರ್ದೈವವೇ ಸರಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin