ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಕೊಂದು ಕೊನೆಗೆ ತಾನೂ ಸತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body--01

ಹೈದರಾಬಾದ್, ಜು.26- ವ್ಯಕ್ತಿಯೊಬ್ಬ ಕುಟುಂಬದ ಐವರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.32 ವರ್ಷದ ಎಸ್ ಸಲೀಂ ಎಂಬ ವ್ಯಕ್ತಿ ತನ್ನ ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಚಾನಲ್‍ಗೆ ತಳ್ಳಿ ತಾನೂ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲೆಯ ಜಿಲ್ಲಚರುವು ಗ್ರಾಮದ ಸಲೀಂ ತನ್ನ ವೃದ್ಧ ತಾಯಿ-ತಂದೆ, ಹೆಂಡತಿ ಹಾಗೂ 10 ವರ್ಷದೊಳಗಿನ ಇಬ್ಬರು ಮಕ್ಕಳನ್ನು ನಿಷ್ಕರುಣೆಯಿಂದ ನೀರಿಗೆ ನೂಕಿದ್ದಾನೆ. ನಂತರ ಅವನೂ ನದಿಗೆ ಧುಮುಕಿ ಪ್ರಾಣ ಬಿಟ್ಟಿದ್ದಾನೆ.

ಕುಟುಂಬದಲ್ಲಿನ ವಿವಾದ ಮತ್ತು ಮನಸ್ತಾಪಗಳೇ ಈ ಘಟನೆಗೆ ಕಾರಣ ಎಂದು ಸಲೀಂ ಡೆತ್ ನೋಟ್‍ನಲ್ಲಿ ಬರೆದಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin