ತಾಲಿಬಾನ್ ಉಗ್ರರ ದಾಳಿಯಲ್ಲಿ 26 ಮಂದಿ ಅಪ್ಘಾನ್ ಯೋಧರು ಹತ

Taliban-attack
ಕಂದಾಹರ್,ಜು.26-ಅಪ್ಘಾನ್ ರಾಷ್ಟ್ರದ ಕಂದಾಹರ್ ಪ್ರಾಂತ್ಯದ ಮಿಲಿಟರಿ ತಾಣಗಳ ಮೇಲೆ ತಾಲಿಬನ್ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಯೋಧರು ಹತರಾಗಿದ್ದು,13 ಮಂದಿ ಗಂಭೀರ ಗಾಯಗೊಂಡಿದ್ದಾರೆ.  ಕಳೆದ ರಾತ್ರಿ ಖಾಕ್ರೇಜ್ ಜಿಲ್ಲೆಯ ಕರ್ಜಲಿ ಸಮೀಪ ರಕ್ಷಣಾ ಪಡೆಗಳ ಶಿಬಿರಗಳ ಮೇಲೆ ತಾಲಿಬಾನ್ ಉಗ್ರರು ಏಕಾಏಕಿ ದಾಳಿ ನಡೆಸಿದ್ದು,ಇದರಿಂದಾಗಿ ಸೇನಾ ಪಡೆಗಳಲ್ಲಿ ಹಸ್ತವ್ಯಸ್ತಗೊಂಡವಲ್ಲದೆ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು ಎಂದು ರಕ್ಷಣಾ ಸಚಿವಾಲಯದ ಮುಖ್ಯ ವಕ್ತಾರ ದೆವ್‍ಲತ್ ವಜಿರಿ ತಿಳಿಸಿದ್ದಾರೆ.  ದಾಳಿ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಸೇನಾಪಡೆ ಉಗ್ರರನ್ನು ಹತ್ತಿಕ್ಕಲು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments