ದವನ್ ,ಪೂಜಾರ ಶತಕ ನೆರವಿನಿಂದ ಬೃಹತ್ ಮೊತ್ತದತ್ತ ಭಾರತ

DAWAN

ಗಾಲೆ ,ಜು 26.-ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ಅವರ ಅಮೋಘ ಶತಕಗಳ ನೆರವಿನಿಂದ ಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಭಾರತ ಬೃಹತ್ ಮೊತ್ತದತ್ತಾ ದಾಪುಗಾಲು ಇಟ್ಟಿದೆ.  ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಶಿಖರ್ ಧವನ್ ಅಮೋಘ ಆಟದಿಂದ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದರು . ಆರಂಭದಿಂದಲೂ ಅಬ್ಬರಿಸಿದ ಆಕರ್ಷಕ ಎಡಗೈ ಆಟಗಾರ ತಮ್ಮ ನೈಜ ಆಟವನ್ನು ಮುಂದುವರೆಸಿ ದ್ವಿಶತಕದ ಅಂಚಿನಲ್ಲಿ ಔಟ್ ಆದರೆ ಕ್ಲಾಸಿಕ್ ಬ್ಯಾಟ್ಸ್ ಮ್ಯಾನ್ ಚೇತೇಶ್ವರ ಪೂಜಾರ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಿದ್ದು ಶತಕ ಸಿಡಿಸಿ ಭಾರತಕ್ಕ ದಿನದ ಗೌರವವನ್ನು ತಂದು ಕೊಟ್ಟು ಮುನ್ನಡೆಸಿದ್ದಾರೆ.

pujara
ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಅಭಿನವ್ ಮುಕುಂದ್ ಕೇವಲ 12 ರನ್ ಗಳಿಸಿದರೆ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಅಂತಿಮವಾಗಿ ಭಾರತ 3 ವಿಕೆಟ್ ನಷ್ಟಕ್ಕೆ 355 ರನ್ ದಾಖಲಿಸಿದೆ. ಶತಕ ಸಿಡಿಸಿರುವ ಚೇತೇಶ್ವರ್ ಪೂಜಾರ (120) ಮತ್ತು ಅಜಿಂಕ್ಯ ರಹಾನೆ 22 ರನ್ ಗಳಿಸಿದ್ದು ನಾಳೆಯ ಆಟಕ್ಕೆ ಅಜೇಯರಾಗಿ ಉಳಿದಿದ್ದಾರೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin