ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದು ಒದೆ ತಿಂದ ಐಎಸ್ ಉಗ್ರರು

ISIS--01

ಮಾಮ್‍ಬಿಜ್ (ಸಿರಿಯಾ), ಜು.26- ಯುದ್ಧ ಪೀಡಿತ ಸಿರಿಯಾದ ಮಸೂಲ್ ನಗರವನ್ನು ಐಸ್‍ಐಸ್ ಉಗ್ರರ ಹಿಡಿತದಿಂದ ಮುಕ್ತಗೊಳಿಸಿದ ಅಮೆರಿಕ ಬೆಂಬಲಿತ ಸಿರಿಯಾ ಪಡೆಗಳು ನಗರ ಬಿಟ್ಟು ತೆರಳುವಂತೆ ಉಗ್ರರಿಗೆ ಗಡುವು ನೀಡಿದ್ದವು. ಅನೇಕ ಉಗ್ರರು ಜೀವ ಉಳಿದರೆ ಸಾಕೆಂದು ಪರಾರಿಯಾಗಿದ್ದರು. ಆದರೆ ಕೆಲವರು ಅಲ್ಲಿಯೇ ಉಳಿದು ಅಲ್ಲಿನ ನಾಗರಿಕರ ಜತೆ ಸಾಮಾನ್ಯರಂತೆ ಇರುವ ಪ್ರಯತ್ನವನ್ನು ಮಾಡಿದ್ದರು. ಈ ಸಂದರ್ಭ ಕೆಲವು ಉಗ್ರರು ಸೈನಿಕರ ಗಮನಕ್ಕೆ ಬಾರದಂತೆ ಹೆಂಗಸರಂತೆ ಛದ್ಮವೇಷ ತೊಟ್ಟು, ಬುರ್ಖಾ ಧರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೈನಿಕರ ಕೈಗೆ ಸಿಕ್ಕಿ ಬಿದ್ದು ಒದೆ ತಿಂದ ವಿಡಿಯೋ ದೃಶ್ಯಾವಳಿ ಈಗ ವೈರಲ್ ಆಗಿದೆ.

ಮೂವರು ಉಗ್ರರು ಹೆಣ್ಣು ವೇಷ ತೊಟ್ಟು ಬುರ್ಖಾ ಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಮಿಲಿಟರಿ ಸಿಬ್ಬಂದಿ ಅವರನ್ನು ಪತ್ತೆ ಹಚ್ಚಿ ಬುರ್ಖಾ ತೆಗೆದಾಗ ಅವರ ಈ ಕೃತ್ಯ ಬಯಲಾಗಿದೆ. ನಿರ್ದಾಕ್ಷಿಣ್ಯವಾಗಿ ಮಕ್ಕಳು, ಮಹಿಳೆಯರು, ವೃದ್ಧರೆನ್ನದೆ ಕೊಚ್ಚಿ ಕೊಲೆ ಮಾಡುತ್ತಿದ್ದ ಈ ಪಾತಕಿಗಳು ತಮ್ಮ ಜೀವಕ್ಕೇ ಸಂಚಕಾರ ಬಂದಾಗ ಜೀವ ಉಳಿಸಿಕೊಳ್ಳಲು ಹೇಗೆ ದೈನ್ಯದಿಂದ ವರ್ತಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin