ಮಕ್ಕಳಿಗೆ ಹಾಲು ನೀಡುವ ಮೂಲಕ ‘ಬಸವ ಪಂಚಮಿ’ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Basava-Panchami--01

ತುಮಕೂರು, ಜು.26-ಈ ಬಾರಿಯ ನಾಗರ ಪಂಚಮಿಯನ್ನು ಅಂಗನವಾಡಿ ಮಕ್ಕಳು,ಸರಕಾರಿ ಆಸ್ಪತ್ರೆಯ ರೋಗಿಗಳು,ಅಶ್ರಮ ವಾಸಿಗಳಿಗೆ ಬಿಸಿ ಹಾಲು ನೀಡುವ ಮೂಲಕ ವೈಜ್ಞಾನಿಕವಾಗಿ ಆಚರಿಸಲು ಮಾನವ ಬಂಧುತ್ವ ವೇದಿಕೆ-ಕರ್ನಾಟಕ ಮುಂದಾಗಿದೆ. ಧಾರ್ಮಿಕ ಶ್ರದ್ಧೆ, ನಂಬಿಕೆ ಮತ್ತು ಆಚರಣೆಗಳು ಮೌಢ್ಯದ ಮೇಲೆ ಅವಲಂಬಿತವಾಗಬಾರದು ಎಂಬ ಸಂದೇಶವನ್ನು ಜನತೆಗೆ ಸಾರುವ ಉದ್ದೇಶದಿಂದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯದಲ್ಲಿ ಸುಮಾರು 1000 ಜಾಗಗಳಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲು ಮುಂದಾಗಿದ್ದು, ಜನರಿಗೆ ಬಸವ ಪಂಚಮಿ ಆಚರಣೆಯ ಉದ್ದೇಶ ಮತ್ತು ಅದರಿಂದಾಗುವ ಲಾಭವನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

f3a4d9e4-7c87-4cd5-9233-cb9ed9019d37

ಪ್ರಸ್ತುತ ರಾಜ್ಯದಲ್ಲಿ ಸಂಭವಿಸುತ್ತಿರುವ ಶೇ.43 ರಷ್ಟು ಶಿಶು ಮರಣಗಳಿಗೆ ಅಪೌಷ್ಠಿಕತೆ ಕಾರಣವಾಗಿದೆ.ಅಲ್ಲದೆ ಮಕ್ಕಳಲ್ಲಿ ಶೇ.70ರಷ್ಟು ರಕ್ತ ಹೀನತೆಯಿಂದ ಬರುವ ಖಾಯಿಲೆಗಳಿಗೆ ಅಪೌಷ್ಠಿಕತೆ ಕಾರಣವಾಗಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಪ್ರಯೋಗವಾಗಿದೆ.ಈ ವೈಜ್ಞಾನಿಕ ಆಂದೋಲನದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ವೇದಿಕೆ ಜಿಲ್ಲಾ ಸಂಯೋಜಕ ಜಿ.ವಿ.ಗಿರೀಶ್ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin