ಮುಂಬೈ ಕಟ್ಟಡ ಕುಸಿತ ದುರಂತ, ಸತ್ತವರ ಸಂಖ್ಯೆ 17ಕ್ಕೆರಿಕೆ

Mumbai-Building--01

ಮುಂಬೈ, ಜು.26- ನಿನ್ನೆ ಇಲ್ಲಿಸಂಭವಿಸಿದ ಘಾಟ್ಕೋಪರ್‍ನ ಕಟ್ಟಡ ಕುಸಿತ ದುರಂತದ ಪ್ರಕರಣದಲ್ಲಿ ಅವಶೇಷಗಳಡಿಯಿಂದ ಇಂದು ಮತ್ತೆ ಐದು ಮೃತ ದೇಹಗಳನ್ನು ಹೊರತೆಗೆಯುವುದರೊಂದಿಗೆ ಇಲ್ಲಿ ಯ ವರೆಗೆ ಸಾವನ್ನಪ್ಪಿದವರ ಸಂಖ್ಯೆ 17ಕ್ಕೇರಿದೆ. ನಿನ್ನೆ ಇಲ್ಲಿನ ನಾಲ್ಕು ಮಹಡಿ ಕಟ್ಟಡವೊಂದು ಕುಸಿದು ಬಿದ್ದಿತ್ತು. ನಿನ್ನೆ ಬೆಳಗಿನಿಂದ ಆರಂಭವಾದ ರಕ್ಷಣಾಕರ್ಯ ಇಡೀ ರಾತ್ರಿಯೂ ನಡೆದು ಇನ್ನೂ ಕೂಡ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ(ಎನ್‍ಡಿಆರ್‍ಎಫ್) ಮುಖ್ಯಸ್ಥರು ತಿಳಿಸಿದ್ದಾರೆ.

ನಿನ್ನೆ ಅವಶೇಷದ ಅಡಿ ಸಿಲುಕಿದ್ದವರ ಪೈಕಿ 11 ಮಂದಿಯನ್ನು ರಕ್ಷಿಸಿ ಗಾಯಗೊಂಡಿದ್ದ ಹಲವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಕುಸಿದು ಬಿದ್ದಿರುವ ಮಣ್ಣಿನ ಅಡಿಯಲ್ಲಿ ಇನ್ನೂ ಕೆಲವರು ಸಿಕ್ಕಿಹಾಕಿ ಕೊಂಡಿರುವ ಸಾಧ್ಯತೆಯಿದ್ದು ಸಾವಿನ ಸಂಖ್ಯೆ ಹೆಚ್ಚಬಹುದೆಂಬ ಆತಂಕವನ್ನು ರಕ್ಷಣಾ ತಂಡ ವ್ಯಕ್ತಪಡಿಸಿದೆ.
ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‍ಎಫ್ ತಂಡ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin