ಮೈಸೂರು ಕೋರ್ಟ್ ಸ್ಫೋಟ ಪ್ರಕರಣದ ಬಳಿಕವೂ ಸುಧಾರಿಸದ ಭದ್ರತಾ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Court-Blast--01

ಮೈಸೂರು, ಜು.26-ನ್ಯಾಯಾಲಯದ ಆವರಣದಲ್ಲಿ ಬಾಂಬ್‍ಸ್ಫೋಟ ಪ್ರಕರಣ ನಡೆದು ಇಡೀ ನಗರವನ್ನೇ ತಲ್ಲಣಗೊಳಿಸಿದ್ದ ನಂತರವೂ ಎಚ್ಚೆತ್ತುಕೊಳ್ಳದ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯವೋ ಎಂಬಂತೆ ನೋಂದಣಿಯಾಗದ ವಾಹನಗಳು ನ್ಯಾಯಾಲಯದ ಆವರಣ ಪ್ರವೇಶಿಸುತ್ತಿರುವುದು ಸಾಮಾನ್ಯವಾಗಿದೆ.
ಹಲವಾರು ದಿನಗಳಿಂದ ನ್ಯಾಯಾಲಯದ ಆವರಣಕ್ಕೆ ಇಂತಹ ವಾಹನಗಳು ಬರುತ್ತಿದ್ದು, ನೋಂದಣಿ ಸಂಖ್ಯೆ ಇಲ್ಲದ ಈ ಬಿಳಿಯ ಮಾರುತಿ ವ್ಯಾನ್ ಕನಿಷ್ಠ ಆವರಣದಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲದೆ ನ್ಯಾಯಾಲಯದ ಮುಂದೆಯೇ ನಿಂತರೂ ಕೇಳುವವರೇ ಇಲ್ಲದಂತಾಗಿದೆ.

ಈ ಬಗ್ಗೆ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದರೆ ನಮಗೆ ಈ ವಿಚಾರ ತಿಳಿದಿಲ್ಲ. ವಾಹನಗಳಲ್ಲಿ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಪರಿಶೀಲಿಸಲು ಮಾತ್ರ ನಮಗೆ ಸೂಚನೆ ಇದೆ. ಅದರಂತೆ ಪರಿಶೀಲಿಸುತ್ತೇವೆ. ವಾಹನದ ನೋಂದಣಿ ಆಗಿದೆಯೇ, ಇಲ್ಲವೇ ಅಥವಾ ನಂಬರ್ ಪ್ಲೇಟ್ ಇದೆಯೇ, ಇಲ್ಲವೆ ಎಂಬ ಬಗ್ಗೆ ನಾವು ಪರಿಶೀಲಿಸುವುದಿಲ್ಲ ಎನ್ನುತ್ತಾರೆ. ಬಾಂಬ್ ಸ್ಫೋಟ ಪ್ರಕರಣದ ನಂತರ ಹೆಚ್ಚಿನ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳ ಭದ್ರತೆ ಅಳವಡಿಸಿದ್ದರೂ ಇಂತಹ ಅಪರಿಚಿತ ವಾಹನಗಳು ಆವರಣ ಪ್ರವೇಶಿಸುತ್ತಿರುವ ಬಗ್ಗೆ ಪೊಲೀಸರಾಗಲಿ, ಭದ್ರತಾ ಸಿಬ್ಬಂದಿಯಾಗಲಿ ತಪಾಸಣೆ ಮಾಡುವ ಗೋಜಿಗೆ ಹೋಗಿಲ್ಲ. ಇನ್ನು ಎಚ್ಚೆತ್ತುಕೊಳ್ಳುವುದು ಬಹುದೂರದ ಮಾತು.

ಇಂತಹ ನಿರ್ಲಕ್ಷ್ಯವೇ ಮುಳುವಾಗಬಹುದಾಗಿದ್ದು, ಇನ್ನಾದರೂ ಇಂತಹ ವಾಹನಗಳು ಹಾಗೂ ನ್ಯಾಯಾಲಯದ ಆವರಣದಲ್ಲಿನ ಹೆಚ್ಚಿನ ಭದ್ರತೆಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin