ರಮಾನಾಥ್ ರೈಗೆ ಗೃಹ ಖಾತೆ : ಕೆಲ ಸಚಿವರಲ್ಲಿ ಅಸಮಾಧಾನ

Ramanath-Rai--01

ಬೆಂಗಳೂರು,ಜು.26-ಗೃಹ ಖಾತೆಗೆ ರಮಾನಾಥ್ ರೈ ಹೆಸರು ಕೇಳಿ ಬರುತ್ತಿರುವ ನಡುವೆ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಸೇರಿದಂತೆ ಹಲವು ಹಿರಿಯರಿಗೆ ಗೃಹ ಖಾತೆ ನೀಡುವಂತೆ ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಒಲ್ಲದ ಕಾರಣ ಅನಿಶ್ಚಿತತೆ ಮುಂದುವರೆದಿತ್ತು. ಇತ್ತೀಚೆಗೆ ಕರಾವಳಿಯಲ್ಲಿ ನಡೆದಿದ್ದ ಗಲಭೆ ಹಿನ್ನೆಲೆಯಲ್ಲಿ ಗೃಹ ಖಾತೆಗೆ ಸಚಿವರೇ ಇಲ್ಲದಿರುವ ಬಗ್ಗೆ ಸರ್ಕಾರದ ವಿರುದ್ದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‍ನ ಕೆಲ ನಾಯಕರ ಜೊತೆ ಈ ವಿಷಯ ಪ್ರಸ್ತಾಪಿಸಿದ್ದರು. ಆದರೆ ಯಾರಿಗೆ ನೀಡಬೇಕೆಂಬುದು ನಿರ್ಧಾರವಾಗಿರಲಿಲ್ಲ.

ಪ್ರಸ್ತುತ ರೈ ಅವರ ಹೆಸರು ಮಾಧ್ಯಮಗಳಲ್ಲಿ ಹರಿದಾಡುತ್ತಿರುವಂತೆಯೇ ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ರಮೇಶ್‍ಕುಮಾರ್ ಸೇರಿದಂತೆ ಹಲವರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕಾಂಗದಲ್ಲಿ ನಾನು ಹಿರಿಯನಾಗಿದ್ದೇನೆ. ನನಗೂ ಕೂಡ ಗೃಹ ಖಾತೆ ನಿಭಾಯಿಸುವ ಸಾಮಥ್ರ್ಯವಿದೆ ಎಂದು ರಮೇಶ್‍ಕುಮಾರ್ ಹೇಳಿದ್ದಾರೆ. ಇದೇ ರೀತಿ ಕೆಲ ಹಿರಿಯ ಸಚಿವರೂ ಕೂಡ ಬಹಿರಂಗವಾಗಿಲ್ಲದಿದ್ದರೂ ಪಕ್ಷದ ಆಂತರಿಕ ವಲಯದಲ್ಲಿ
ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲೂ ಕೂಡ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕೂಡ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin