ವಿಶೇಷ ತನಿಖಾ ತಂಡದ ಎದುರು ನಟಿ ಚಾರ್ಮಿ ಹಾಜರು

Chamrmi--01

ಹೈದರಾಬಾದ್, ಜು.26- ತೆಲುಗು ಚಲನಚಿತ್ರ ರಂಗದಲ್ಲಿ ಮಾದಕ ದ್ರವ್ಯದ ಹಾವಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಟಾಲಿವುಡ್ ನಟಿ ಚಾರ್ಮಿ ಕೌರ್ ಇಂದು ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಎದುರು ಹಾಜರಾದರು. ತೆಲುಗು ಚಿತ್ರರಂಗದಲ್ಲಿ ಇದುವರೆಗೆ ಎಸ್‍ಐಟಿ ಮುಂದೆ ಹಾಜರಾಗಿರುವ 7ನೇ ವ್ಯಕ್ತಿ ಚಾರ್ಮಿ ಆಗಿದ್ದಾಳೆ. ಎಸ್‍ಐಟಿ ಟಾಲಿವುಡ್‍ನ 12 ಮಂದಿಗೆ ನೋಟೀಸ್ ನೀಡಿತ್ತು.

ಈ ಪ್ರಕರಣದಲ್ಲಿ ವೈದ್ಯರು ಮತ್ತು ನಟ-ನಟಿಯರು ಸೇರಿದ್ದಾರೆ.
ನಗರದ ನಾಂಪಲ್ಲಿ ಪ್ರದೇಶದಲ್ಲಿರುವ ಎಸ್‍ಐಟಿ ಕಚೇರಿಗೆ ಚಾರ್ಮಿ ಇಂದು ಮುಂಜಾನೆ ಹಾಜರಾದಳು. ತನ್ನ ಖುದ್ದು ಹಾಜರಾತಿಯಿಂದ ವಿನಾಯಿತಿ ನಿಡಿ ವಕೀಲರ ಮುಖಾಂತರ ವಿಚಾರಣೆ ನಡೆಸಬೇಕೆಂಬ ಚಾರ್ಮಿ ಮನವಿಯನ್ನು ಎಸ್‍ಐಟಿ ನಿನ್ನೆಯಷ್ಟೇ ತಿರಸ್ಕರಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin