ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi UN

ವಿಶ್ವಸಂಸ್ಥೆ, ಜು.26- ಬರುವ ಸೆಪ್ಟಂಬರ್‍ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಆಗಮಿಸಲಿದ್ದಾರೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು, ಈ ವಾರ್ಷಿಕ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.

ವಿಶ್ವಸಂಸ್ಥೆಯ 72ನೇ ಮಹಾಧೀವೇಶನದಲ್ಲಿ ಭಾಷಣ ಮಾಡಲಿರುವ ಗಣ್ಯರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಅದರಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಸೆಪ್ಟಂಬರ್ 23ರಂದು ಬೆಳಗ್ಗೆ ಅವರ ಭಾಷಣದ ಕಾರ್ಯಕ್ರಮವಿರುತ್ತದೆ. ಸುಶ್ಮಾ ಸ್ವರಾಜ್ ಅವರು ಕಳೆದ ವರ್ಷವೂ ಕೂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದರು.

ಅಧಿವೇಶನವು ಸೆ.19ರಂದು ಪ್ರಾರಂಭವಾಗಲಿದ್ದು 25ರಂದು ಕೊನೆಗೊಳ್ಳಲಿದೆ. ವಿಶೇಷವೆಂದರೆ ಈ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಹಾಧಿವೇಶನದಲ್ಲಿ ಮೊತ್ತ ಮೊದಲ ಬಾರಿಗೆ ಭಾಷಣ ಮಾಡಲಿದ್ದು, ಇಡೀ ವಿಶ್ವದ ಗಮನ ಟ್ರಂಪ್ ಭಾಷಣದ ಮೇಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin