ಸೂಟ್‍ಕೇಸ್ ವಿಚಾರ ಕುರಿತು ಬೇಕಿದ್ದರೆ ಸಿಬಿಐ ತನಿಖೆ ನಡೆಸಲಿ : ಎಚ್‍ಡಿಕೆ ಸವಾಲು

JDS-Kumaraswamy--01

ಹುಣಸೂರು, ಜು.26- ಸೂಟ್‍ಕೇಸ್ ವಿಚಾರದಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿದೆ. ನಾನು ಎಲ್ಲಿ, ಯಾರ ಹತ್ತಿರ, ಎಷ್ಟು , ಸೂಟ್‍ಕೇಸ್ ತೆಗೆದುಕೊಂಡಿದ್ದೇನೆ ಎಂಬ ಬಗ್ಗೆ ಬೇಕಿದ್ದರೆ ಸಿಬಿಐ ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರ್‍ಸ್ವಾಮಿ ಸವಾಲು ಹಾಕಿದರು. ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, 20 ತಿಂಗಳ ನನ್ನ ಅಧಿಕಾರವಧಿಯಲ್ಲಿ ನಾಡಿನ ದಲಿತರ, ವೀರಶೈವರ, ಯಾದವರ ಸಮುದಾಯಗಳ ಮನೆಗಳಲ್ಲಿ ವಾಸ್ತವ್ಯ, ಜನತಾದರ್ಶನ, ಗ್ರಾಮ ವಾಸ್ತವ್ಯಗಳಂತಹ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಕಾಲ ಕಳೆದಿದ್ದೇನೆ ಎಂದರು.

ನಾನು ಆಸ್ತಿ ಸಂಪಾದನೆ ಮಾಡಿದ್ದರೂ, ಸೂಟ್‍ಕೇಸ್ ತುಂಬಿಕೊಂಡು ಬರುವಂತಹ ಆಸ್ತಿಯಲ್ಲ. ರಾಜ್ಯದ ಜನರ ಪ್ರೀತಿ ವಿಶ್ವಾಸಗಳಂತಹ ಆಸ್ತಿಯನ್ನು ಸಂಪಾದನೆ ಮಾಡಿದ್ದೇನೆ. ಸೂಟ್‍ಕೇಸ್ ಸಂಪಾದನೆ ಮಾಡಿದ್ದೆ ಎಂದು ಹೇಳುವ ಅವಿವೇಕಿಗಳು ಯಾವುದೇ ತನಿಖೆ ಮಾಡಿಸಲಿ ನಾನು ಸಿದ್ಧ ಎಂದರು.
ನನ್ನ ಬಗ್ಗೆ ಯಾರು ಯಾರು ಚರ್ಚೆ ಮಾಡಿದ್ದಾರೋ ದೇವರಲ್ಲಿ ನಂಬಿಕೆ ಇದ್ದರೆ ಲಘುವಾಗಿ ನಡೆದುಕೊಳ್ಳುವುದು, ಮಾತನಾಡುವುದನ್ನು ನಿಲ್ಲಿಸಲಿ. ನಾವು ಅಧಿಕಾರದಲ್ಲಿದ್ದು, ಮಾಡಿz ಕಾರ್ಯಕ್ರಮಗಳನ್ನು ದೂರದಿಂದಲೇ ನೋಡಿ ಹರಸಿದ ಜನ ನೀವುಎಂದರು.

ಬತ್ತದ ಬೆಳೆಗೆ ನೀರು, ಹಾಳಾದ ರೈತರ ಬೆಳೆಗೆ ಪರಿಹಾರ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸದಿದ್ದರೆ, ಜು.31 ರಂದು ಅರಸರ ಕರ್ಮ ಭೂಮಿ ಹುಣಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವುದಾಗಿ ತಿಳಿಸಿದರು.  ಹುಣಸೂರಿನಲ್ಲಿ 10-12 ಕೋಟಿ ಖರ್ಚು ಮಾಡಿ ಚಿಲ್ಕುಂದ ಮತ್ತಿತರ ಕೆರೆಗಳಿಗೆ ಏತ ನೀರಾವರಿ ಯೋಜನೆಗಳನ್ನು ಮಾಡಿ ಯೋಜನೆಯ ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದ ಅವರು, 2016-17 ಸಾಲಿನ ಸಾಲವನ್ನು ರೈತರು ಮರು ಪಾವತಿ ಮಾಡಿದ್ದಾರೆ. ಹಾಗಾದರೆ ನಿಮ್ಮ ಸಾಲ ಮನ್ನಾ ಯಾವ ಸಾಲಿನದು ಎಂದು ಪ್ರಶ್ನಿಸಿದರು.

ವಿಶ್ವನಾಥ್ ರವರು ತಮ್ಮ ಅಧಿಕಾರವಧಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ಪ್ರಾಮಾಣಕವಾಗಿ ಕೆಲಸ ಮಾಡಿದ ಇವರಿಗೆ ಕಾಂಗ್ರೆಸ್ ಅನ್ಯಾಯದಿಂದ ಹೊರ ಹಾಕಿದಾಗ, ನಮ್ಮ ಪಕ್ಷ ಅವಕಾಶ ಕಲ್ಪಿಸಿ ರಾಜಕೀಯ ಮರುಜೀವ ನೀಡಿದೆ ಎಂದರು.  ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲವನ್ನು ಮನ್ನ ಮಾಡುತ್ತೇವೆ, 70 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ಮಾಶಾಸನ ನೀಡುತ್ತೇವೆ, ಗಿಡ ನೆಡುವ ಹೆಸರಿನಲ್ಲಿಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕ್ರಮವನ್ನು ನಾವು ಅಧಿಕಾರಕ್ಕೆ ಬಂದರೆ ರಾಜ್ಯದ 5 ಲಕ್ಷ ಕುಟುಂಬಗಳ ಮಹಿಳೆಯರು ಮತ್ತು ಯುವಕರಿಗೆ ಮಾಸಿಕ ಆರು ಸಾವಿರ ಸಂಬಳ ನೀಡಿ ನಿರಂತರವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ರೂಪಿಸುತ್ತೇವೆ ಎಂದರು.

ಹಿರಿಯ ಮುತ್ಸದಿ ರಾಜಕರಣ ಹೆಚ್.ವಿಶ್ವನಾಥ್ ಮಾತನಾಡಿ, ಬೃಹತ್ ಜನ ಸಾಗರದ ಐತಿಹಾಸಿಕದ ಈ ಸಭೆ ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ದೇವರಾಜ ಅರಸರ ಗರಡಿಯಲ್ಲಿ ಬೆಳೆದ ನಾನು ಅವರ ಕರ್ಮ ಭೂಮಿಯಲ್ಲಿ ಹೆಚ್.ಡಿ.ದೇವೇಗೌಡರ ಜಾತ್ಯಾತೀತ ಪಕ್ಷವನ್ನು ಸೇರುವ ಮೂಲಕ ಹುಣಸೂರಿನಲ್ಲಿ ಸ್ಪರ್ಧಿಸುವ ಭಾಗ್ಯ ನನ್ನದಾಗಿದೆ. ಜನತಂತ್ರ್ಯ ವ್ಯವಸ್ಥೆಯ ಅತ್ಯನ್ನತ ಸ್ಥಾನದಲ್ಲಿ ಮುಂದುವರಿಯಲು ಹುಣಸೂರು ತಾಲ್ಲೂಕಿನ ಬಡವರ ಪ್ರತಿನಿಧಿಯಾಗಿದ್ದೇನೆ. 40 ವರ್ಷಗಳ ಕಾಲ ರಾಷ್ಟ್ರೀಯ ಪಕ್ಷದಲ್ಲಿ ಸುದೀರ್ಘ ಪ್ರಯಾಣ ಮಾಡಿ ಈಗ ಅದರಿಂದ ಹೊರ ಬಂದು ಜಾತ್ಯಾತೀತ ಜನತದಳ ನನಗೆ ಆಶ್ರಯವಾಗಿದೆ ಎಂದರು.

ಖಾಲಿ ಭಾಗ್ಯಗಳ ಭ್ರಮೆಯಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ಸರ್ಕಾರ, ಕೊಲೆಯ ಭ್ರಮೆಯಲ್ಲಿ ಮುಳುಗಿ ಹೋಗಿರುವ ಬಿ.ಜೆ.ಪಿ. ಸರ್ಕಾರಗಳು ಅನ್ನಧಾತ ಅನ್ನ ಕ್ಕೆಕೈಹೊಡ್ಡುವ ಸ್ಥಿತಿ ತಂದು ನಿಲ್ಲಿಸಿದ್ದಾರೆ. ಇಂತಹ ಸರ್ಕಾರಗಲ ಆಡಳಿತ ಬೇಕೆ. ಹಲವು ವಿಚಾರಗಳಲ್ಲಿ ರಾಜ್ಯದ ಅಭ್ಯುದಯವನ್ನು ಕಾಣಲು ನಾನು ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ಪಥ ಬದಲಿಸಿ ಕುಮಾರ ಪಥವನ್ನು ಹಿಡಿದಿದ್ದೇನೆ ಎಂದು ಹೇಳಿದರು. ಶಾಸಕರಾದ ಎಸ್.ಚಿಕ್ಕಮಾಧು. ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್, ಹರೀಶ್‍ಗೌಡ, ಮಾಜಿ ಜಿ.ಪಂ. ಸದಸ್ಯ ಡಿ.ಕೆ.ಕುನ್ನೇಗೌಡ, ಮಾಜಿ ಬ್ಲಾಕ್ ಅಧ್ಯಕ್ಷ ಕಣಗಾಲ್ ರಾಮೇಗೌಡ, ನಗರಸಭಾ ಸದಸ್ಯೆ ಧನಲಕ್ಷ್ಮಿ ಶಿವರಾಜ್ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಪಕ್ಷವನ್ನು ತೊರೆದು ಜೆಡಿಎಸ್. ಸೇರ್ಪಡೆಗೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin