5 ಲಕ್ಷ ಬೆಲೆಯ ರಕ್ತಚಂದನ ವಶ

Crime-Bengaluru

ಬೆಂಗಳೂರು, ಜು.26- ರಕ್ತ ಚಂದನದ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ತಮಿಳುನಾಡಿನ ಇಬ್ಬರನ್ನು ಜಯನಗರ ಉಪವಿಭಾಗದ ಬಸವನಗುಡಿ ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆಯ 398.5 ಕೆಜಿ ತೂಕದ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.  ಮೂಲತಃ ತಮಿಳುನಾಡಿನ ತಿರುಪತಿ (33), ರಾಜೇಂದ್ರನ್ (47) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ್ದ ಟಾಟಾಸುಮೋ ಹಾಗೂ 2 ಮೊಬೈಲ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇವರಿಬ್ಬರು ತಮಿಳುನಾಡಿನ ವಣಂಬಾಡಿ ತಾಲೂಕು ಮುಖಾಂತರ ರಕ್ತಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ವಾಹನದಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದು ಬಸವನಗುಡಿಯ ವಾಣಿವಿಲಾಸ ರಸ್ತೆ, ಫ್ಲೈ ಓವರ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ಬಂಧಿಸಿ 11 ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಈ ಪತ್ತೆ ಕಾರ್ಯವನ್ನು ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin